ಡೆನ್ಮಾರ್ಕ್ ಓಪನ್: ಕಠಿಣ ಪಂದ್ಯ ಗೆದ್ದ ಸೈನಾ ದ್ವಿತೀಯ ಸುತ್ತಿಗೆ, ಆಘಾತಕಾರಿ ಸೋಲು ಕಂಡ ಸಿಂಧೂ ಹೊರಕ್ಕೆ
ಪ್ರತಿಷ್ಠಿತ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೈನಾ ನೆಹ್ವಾಲ್ ಪ್ರಥಮ ಸುತ್ತಿನ ಜಯ ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದರೆ

Published On :
ಓಡನ್ಸ್(ಡೆನ್ಮಾರ್ಕ್): ಪ್ರತಿಷ್ಠಿತ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೈನಾ ನೆಹ್ವಾಲ್ ಪ್ರಥಮ ಸುತ್ತಿನ ಜಯ ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದರೆ ಪಿವಿ ಸಿಂಧೂ ಪ್ರಥಮ ಸುತ್ತಿನಲ್ಲೇ ಸೋಲಿನ ಆಘಾತದೊಡನೆ ಪಂದ್ಯಾವಳಿಯಿಂದ ಹೊರನಡೆದಿದ್ದಾರೆ.
ಮಾಜಿ ವಿಶ್ವ ನಂ. ಒನ್ ಆಟಗಾರ್ತಿ ಸೈನಾ ನೆಹ್ವಾಲ್ ಹಾಂಗ್ ಕಾಂಗ್ ನ ನೈಗನ್ ಯಿ ಚೆಯುಂಗ್ ವಿರುದ್ಧ 20-22 21-17 24-22 ಸೆಟ್ ಗಳಿಂದ ಜಯ ಸಾಧಿಸಿದ್ದಾರೆ.
ಇನ್ನು ಮೂರನೇ ಶ್ರೇಯಾಂಕಿತರಾದ ಸಿಂಧೂ ಬಿವೇನ್ ಝಾಂಗ್ ವಿರುದ್ಧ 17-21 21-16 18-21 ಸೆಟ್ ಗಳಿಂದ ಸೋತು ಹಿಮ್ಮೆಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸಮೀರ್ ವರ್ಮಾ ಚೀನಾದ ಶಿ ಯುಕಿ ವಿರುದ್ಧ 21-17, 21-18 ಸೆಟ್ ಗಳಿಂದ ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಇನ್ನೊಂದೆಡೆ ಮಿಶ್ರ ಡಬಲ್ಸ್ ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಎಸ್. ರಾಂಕಿರೆಡ್ಡಿ ಜೋಡಿ ಕೊರಿಯನ್ ಜೋಡಿಯಾದ ಸಿಂಗ್ ಜೀ ಸೆಯೋ ಹಾಗೂ ಯು ಜಂಗ್ ಚೇ ವಿರುದ್ಧ 17-21 18-21 ಸೆಟ್ ಅಂತರದಲ್ಲಿ ಸೋತು ನಿರ್ಗಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


