ತಂದೆಯನ್ನೇ ಮೀರಿಸುವಂತಿದೆ ಜೂನಿಯರ್ ರೊನಾಲ್ಡೋ ಕಾಲ್ಚೆಳಕ!
ಫುಟ್ಬಾಲ್ ಲೋಕದ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಪುತ್ರ ರೊನಾಲ್ಡೋ ಜೂನಿಯರ್ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗಿದ್ದಾರೆ.

Published On :
ನವದೆಹಲಿ: ಫುಟ್ಬಾಲ್ ಲೋಕದ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಪುತ್ರ ರೊನಾಲ್ಡೋ ಜೂನಿಯರ್ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗಿದ್ದಾರೆ.
ಇತ್ತೀಚೆಗೆ ಕ್ರಿಸ್ಟಿಯಾನೋ ರೊನಾಲ್ಡೋ ಪ್ರತಿನಿಧಿಸುವ ಜುವೆಂಟಸ್ ತಂಡ ಶಾಲಾ ಮಕ್ಕಳಿಗಾಗಿ ಫುಟ್ಬಾಲ್ ತರಬೇತಿ ಆಯೋಜಿಸಿತ್ತು. ಈ ವೇಳೆ ನೂರಾರು ಶಾಲಾ ಮಕ್ಕಳು ಫುಟ್ಬಾಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಜುವೆಂಟಸ್ ಯೂತ್ ತಂಡವನ್ನು ಪ್ರತಿನಿಧಿಸಿದ್ದ ಜೂನಿಯರ್ ರೊನಾಲ್ಡೋ ಏಕಾಂಗಿಯಾಗಿ 2 ಗೋಲು ಬಾರಿಸಿದ್ದರು.
ಈ ವಿಡಿಯೋವನ್ನು ಸೀನಿಯರ್ ರೊನಾಲ್ಡೋ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ವಿಡಿಯೋಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಂತೆಯೇ ಜೂನಿಯರ್ ರೊನಾಲ್ಡೋ ಕಾಲ್ಚಳಕ ಕೂಡ ರೊನಾಲ್ಡೋ ಅಭಿಮಾನಿಗಳ ಮನಸೂರೆಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SportsFootballಕ್ರೀಡೆಫುಟ್ಬಾಲ್Cristiano Ronaldoಗೋಲ್ಕ್ರಿಸ್ಟಿಯಾನೋ ರೊನಾಲ್ಡೋJuventusGoalCristiano Ronaldo Jrರೊನಾಲ್ಡೋ ಜೂನಿಯರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


