ಕ್ರೀಡೆ

ಯೂತ್ ಒಲಿಂಪಿಕ್ಸ್ 2018: ಮಹಿಳಾ ಕುಸ್ತಿಪಟು ಸಿಮ್ರಾನ್ ಗೆ ರಜತ ಹಾರ!

ಮೂರನೇ ಯೂತ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕುಸ್ತಿ ತಾರೆ ಸಿಮ್ರಾನ್ ಮಹಿಳೆಯರ ಫ್ರೀ ಸ್ಟೈಲ್ 43 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಯೂತ್ ಒಲಿಂಪಿಕ್ಸ್ 2018: ಮಹಿಳಾ ಕುಸ್ತಿಪಟು ಸಿಮ್ರಾನ್ ಗೆ ರಜತ ಹಾರ!
ಸಿಮ್ರಾನ್
Published On :
ಬ್ಯುರಿಸ್ ಐರಿಸ್: ಮೂರನೇ ಯೂತ್ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕುಸ್ತಿ ತಾರೆ ಸಿಮ್ರಾನ್ ಮಹಿಳೆಯರ ಫ್ರೀ ಸ್ಟೈಲ್ 43 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.
ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಸಿಮ್ರಾನ್ ಅಮೆರಿಕಾದ ಎಮಿಲಿ ಶಿಲ್ಸನ್ ವಿರುದ್ಧ  6-11 ಅಂತರದಲ್ಲಿ ಸೋತು ರಜತ ಪದಕಕ್ಕೆ ತೃಪ್ತಿಪಟ್ಟರು.
ಇದಕ್ಕೆ ಹಿಂದೆ 2017 ರಲ್ಲಿ ಕಚಕ್ ನ  ವಿಶ್ವ ಚಾಂಪಿಯನ್ ಶಿಪ್ ನಲ್ಲಿ  40 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿಕೊಂಡಿದ್ದರು.
ಪ್ರಸ್ತುತ ಪಂದ್ಯದಲ್ಲಿ ಮೊದಲಿಗೆ ಶಿಲ್ಸನ್ ಎದುರು 2-9 ಅಂತರದಲ್ಲಿ ಮಣಿಯುವ ಮೂಲಕ ಸೋಲಿನ ಭೀತಿ ಅನುಭವಿಸಿದ್ದರು.ಆದರೆ ಎರಡನೇ ಸುತ್ತಿನಲ್ಲಿ ನಾಲ್ಕು ಪಾಯಿಂಟ್ ಗಳನ್ನು ಗಳಿಸಿ ಉತ್ತಮ ಆಟ ಪ್ರದರ್ಶಿಸಿದ್ದರು.
ಏತನ್ಮಧ್ಯೆ 2018 ಕ್ಯಾಡೆಟ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಶಿಲ್ಸನ್  43 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿಕೊಂಡಿದ್ದರು.
ಇನ್ನು ಪ್ರಸಲ್ತ ನಡೆಯುತ್ತಿರುವ ಯೂತ್ ಒಲಂಪಿಕ್ಸ್ ನಲ್ಲಿ ಭಾರತ ಇದುವರೆಗೆ ಒಟ್ಟು ಮೂರು ಚಿನ್ನ, ಐದು ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.