ಏಷ್ಯನ್ ಪ್ಯಾರಾ ಗೇಮ್ಸ್: ಡಿಸ್ಕಸ್ ಎಸೆತದಲ್ಲಿ ದೀಪಾ ಮಲಿಕ್ ಗೆ ಕಂಚು
: ರಿಯೊ ಪ್ಯಾರಾ ಒಲಂಪಿಕ್ಸ್ ಪದಕ ವಿಜೇತ ದೀಪಾ ಮಲಿಕ್ ಏಷ್ಯಾ ಪ್ಯ್ರಾ ಗೇಮ್ಸ್ ನಲ್ಲಿ ಸಹ ಪದಕದ ಸಾಧನೆ ಮುಂದುವರಿಸಿದ್ದಾರೆ. ಇವರು ಡಿಸ್ಕಸ್.....

Published On :
ಜಕಾರ್ತಾ: ರಿಯೊ ಪ್ಯಾರಾ ಒಲಂಪಿಕ್ಸ್ ಪದಕ ವಿಜೇತ ದೀಪಾ ಮಲಿಕ್ ಏಷ್ಯಾ ಪ್ಯ್ರಾ ಗೇಮ್ಸ್ ನಲ್ಲಿ ಸಹ ಪದಕದ ಸಾಧನೆ ಮುಂದುವರಿಸಿದ್ದಾರೆ. ಇವರು ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ ಗಳಿಸುವ ಮೂಲಕ ವೈಯುಕ್ತಿಕ ವಿಭಾಗದಲ್ಲಿ ಎರಡನೇ ಪದಕ ತಮ್ಮದಾಗಿಸಿಕೊಂಡರು.
ಶುಕ್ರವಾರ ನಡೆದ F51/52/53s ವಿಭಾಗದ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದ್ದರು. 9.67 ಮೀಟರ್ ದೂರ ಡಿಸ್ಕಸ್ ಎಸೆಯುವ ಮೂಲಕ ದೀಪಾ ಮೂರನೇ ಸ್ಥಾನ ಗಳಿಸಿದ್ದಾರೆ.
ಇದೇ ವಿಭಾಗದಲ್ಲಿ ಇರಾನ್ ನ ಎಲ್ಹಾಜ್ ದರಾಬಿನ್ ಚಿನ್ನಗಳಿಸಿದರೆ ಬಹರೇನ್ ನ ಫಾತಿಮಾ ನೆಧಾಮ್ ರಜತ ಪದಕ ವಿಜೇತರಾಗಿದ್ದಾರೆ.
ಕ್ಲಬ್ ಥ್ರೋನಲ್ಲಿ ಸ್ವರ್ಣ ಗೆದ್ದಿದ್ದ ಭಾರತದ ಏಕ್ತಾ ಭ್ಯಾನ್ ಸಹ ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅವರು 6.52 ಮೀ ಡಿಸ್ಕಸ್ ಎಸೆಯುವ ಮೂಲಕ ನಾಲ್ಕನೇ ಸ್ಥಾನಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


