ಕ್ರೀಡೆ

ಡಿ.16ಕ್ಕೆ ಸೈನಾ ನೆಹ್ವಾಲ್ - ಕಶ್ಯಪ್ ಮದುವೆ, ಇದು ಅಧಿಕೃತ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಾರುಪಲ್ಲಿ ಕಶ್ಯಪ್ ಅವರು ಡಿಸೆಂಬರ್ 16 ರಂದು...

ಡಿ.16ಕ್ಕೆ ಸೈನಾ ನೆಹ್ವಾಲ್ - ಕಶ್ಯಪ್ ಮದುವೆ, ಇದು ಅಧಿಕೃತ
ಪಾರುಪಲ್ಲಿ ಕಶ್ಯಪ್ - ಸೈನಾ ನೆಹ್ವಾಲ್
Published On :
ಪುಣೆ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಾರುಪಲ್ಲಿ ಕಶ್ಯಪ್ ಅವರು ಡಿಸೆಂಬರ್ 16 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. 
ಈ ಕುರಿತು ಸ್ವತಃ ಸೈನಾ ನೆಹ್ವಾಲ್ ಅವರೇ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ಡಿಸೆಂಬರ್ 20 ಬಳಿಕ ಬ್ಯಾಡಿಂಟನ್ ಪ್ರೀಮಿಯರ್ ಲೀಗ್ ಹಾಗೂ ಟೋಕಿಯೋ ಗೇಮ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿವೆ. ಹೀಗಾಗಿ ಡಿಸೆಂಬರ್ 16 ರಂದೇ ನಮ್ಮ ಮದುವೆ ನಿಶ್ಚಯ ಮಾಡಲಾಗಿದೆ. ಈ ಸಮಯ ಬಿಟ್ಟರೆ ನಮಗೆ ಬೇರೆ ಉತ್ತಮ ಸಮಯ ಇಲ್ಲ ಎಂದಿದ್ದಾರೆ.
ಕಳೆದ 10 ವರ್ಷಗಳಿಂದ ಇಬ್ಬರ ನಡುವೆ ಪರಿಚಯವಿದ್ದು, ಒಬ್ಬರಿಗೆ ಒಬ್ಬರೂ ಚೆನ್ನಾಗಿ ಆರ್ಥ ಮಾಡಿಕೊಂಡಿದ್ದೇವೆ. 2007-08 ರ ಬಳಿಕ ನಾವಿಬ್ಬರೂ ಒಟ್ಟಿಗೆ ಬ್ಯಾಡ್ಮಿಂಟನ್ ಟೂರ್ನಿ ಜರ್ನಿ ಆರಂಭಿಸಿದ್ದು, ಹಲವು ಟೂರ್ನಿಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದೇವೆ. ತರಬೇತಿ ಪಡೆದಿದ್ದೇವೆ. ಬೇರೊಬ್ಬರೊಂದಿಗೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಇಬ್ಬರು ಬಹುಬೇಗ ಆತ್ಮೀಯಾರಗಿದ್ದೇವೆ ಎಂದು ಸೈನಾ ಹೇಳಿದ್ದಾರೆ.
ಹೈದರಾಬಾದ್ ಮೂಲದ ಈ ಕ್ರೀಡಾಪಟುಗಳು ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಗುಸುಗುಸು ಇತ್ತು. ಆದರೆ ಇಬ್ಬರು ಸಹ ಇದನ್ನು ಒಮ್ಮೆಯೂ ದೃಢಪಡಿಸಿರಲಿಲ್ಲ, ನಿರಾಕರಿಸಿಯೂ ಇರಲಿಲ್ಲ. ಕಳೆದ ತಿಂಗಳಷ್ಟೇ ಇಬ್ಬರು ಮದುವೆಯಾಗುತ್ತಿರುವ ವಿಚಾರ ಬಹಿರಂಗವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.