ಭೀಕರ ವಿಡಿಯೋ: ಫಾರ್ಮುಲಾ 3 ಕಾರ್ ರೇಸ್, ಭೀಕರ ಅಪಘಾತದಲ್ಲಿ ರೇಸರ್ಗೆ ಬೆನ್ನು ಮೂಳೆ ಮುರಿತ!
ಮಕಾವ್ ಗ್ರ್ಯಾಂಡ್ ಪ್ರಿಕ್ಸ್ ಫಾರ್ಮುಲಾ 3 ರೇಸ್ ವೇಳೆ ಭೀಕರ ಅಪಘಾತ ಸಂಭವಿಸಿದ್ದು ಇದರಲ್ಲಿ ಜರ್ಮನಿ ಮೂಲದ 17 ವರ್ಷದ ರೇಸರ್ ಸೋಫಿಯಾ ಅವರ ಬೆನ್ನು ಮೂಳೆ ಮುರಿದಿದೆ...

Published On :
ಹಾಂಕಾಂಗ್: ಮಕಾವ್ ಗ್ರ್ಯಾಂಡ್ ಪ್ರಿಕ್ಸ್ ಫಾರ್ಮುಲಾ 3 ರೇಸ್ ವೇಳೆ ಭೀಕರ ಅಪಘಾತ ಸಂಭವಿಸಿದ್ದು ಇದರಲ್ಲಿ ಜರ್ಮನಿ ಮೂಲದ 17 ವರ್ಷದ ರೇಸರ್ ಸೋಫಿಯಾ ಅವರ ಬೆನ್ನು ಮೂಳೆ ಮುರಿದಿದೆ.
ರೇಸ್ ವೇಳೆ ಸೋಫಿಯಾ ಚಲಾಯಿಸುತ್ತಿದ್ದ ಕಾರು ಮೇಲಕ್ಕೆ ಹಾರಿ ಸೇಫ್ಟಿ ನೆಟ್ ಗೆ ಅಪ್ಪಳಿಸಿ ಕೆಳಗೆ ಬಿದ್ದಿದೆ. ಇದರಲ್ಲಿ ಸೋಫಿಯಾಗೆ ಗಂಭೀರ ಗಾಯವಾಗಿದೆ. ಇದೇ ವೇಳೆ ಮತ್ತೊಬ್ಬ ರೇಸರ್ ಶೋ ತ್ಸುಬೊಯ್ ಹಾಗೂ ಇನ್ನಿಬ್ಬರು ಪತ್ರಕರ್ತರು ಸಹ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಅಪಘಾತದ ದೃಶ್ಯ ಪ್ರೇಕ್ಷಕರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಅಪಘಾತದ ಬಳಿಕ ಟ್ವೀಟ್ ಮಾಡಿರುವ ಸೋಫಿಯಾ ಸದ್ಯ ನಾನು ಆರಾಮವಾಗಿದ್ದೇನೆ. ನಾಳೆ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಟ್ವೀಟಿಸಿದ್ದಾರೆ.
OHH MY GODDD
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


