ಆಂಧ್ರ ಪ್ರದೇಶ: ಶಟ್ಲರ್ ಕಿಡಂಬಿ ಶ್ರೀಕಾಂತ್ ಗೆ ಉಪ ಕಲೆಕ್ಟರ್ ಹುದ್ದೆ
ಭಾರತದ ಖ್ಯಾತ ಶಟಲ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರನ್ನು ಆಂಧ್ರ ಪ್ರದೇಶ ಸರ್ಕಾರ ಉಪ ಕಲೆಕ್ಟರ್ ಆಗಿ ನೇಮಕಗೊಳಿಸಿ ಆದೇಶಿಸಿದೆ.

Published On :
ಅಮರಾವತಿ (ಆಂಧ್ರ ಪ್ರದೇಶ): ಭಾರತದ ಖ್ಯಾತ ಶಟಲ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರನ್ನು ಆಂಧ್ರ ಪ್ರದೇಶ ಸರ್ಕಾರ ಉಪ ಕಲೆಕ್ಟರ್ ಆಗಿ ನೇಮಕಗೊಳಿಸಿ ಆದೇಶಿಸಿದೆ.
ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಹಾಗೂ ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲೆಲೆ ಗೋಪಿಚಂದ್.ಸಮ್ಮುಖದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಶ್ರೀಕಾಂತ್ ಅವರಿಗೆ ನೇಮಕಾತಿ ಆದೇಶವನ್ನು ಹಸ್ತಾಂತರಿಸಿದ್ದಾರೆ.
ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರದಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಕ್ಕಾಗಿ ಶ್ರೀಕಾಂತ್ ಅವರನ್ನು ನಾಯ್ಡು ಅಭಿನಂದಿಸಿದ್ದಾರೆ.
ಕಳೆದ ವರ್ಷ ಇಂಡೋನೇಷಿಯಾ ಚಾಂಪಿಯನ್ ಶಿಪ್ ಪ್ರಶಸ್ತಿ ಜಯಿಸಿದ್ದ ಶ್ರೀಕಾಂತ್ ಅವರನ್ನು ಸನ್ಮಾನಿಸಿದ್ದ ಮುಖ್ಯಮಂತ್ರಿ, ಶ್ರೀಕಾಂತ್ ಅವರಿಗೆ ಸರ್ಕಾರಿ ಕೆಲಸದ ಭರವಸೆ ನೀಡಿದ್ದರು.
ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆಯಾದ ಪಿ.ವಿ. ಸಿಂಧು ಅವರ ಬಳಿಕ ಪದ್ಮಶ್ರೀ ಪುರಸ್ಕಾರ ಪಡೆದ ಎರಡನೇ ಅತಿ ಕಿರಿಯ ಕ್ರೀಡಾಳು ಕಿಡಂಬಿ ಶ್ರೀಕಾಂತ್ ಅವರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Andhra Pradeshಆಂಧ್ರ ಪ್ರದೇಶಕಿಡಂಬಿ ಶ್ರೀಕಾಂತ್ಪದ್ಮಶ್ರೀPadma ShriKidambi SrikanthDeputy Collectorಉಪ ಕಲೆಕ್ಟರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


