ಶಮಿ ಜೊತೆ ವಿವಾಹ ಉಳಿಸಿಕೊಳ್ಳಲು ಯತ್ನಿಸಿದ್ದೆ, ಅವರು ಬಂದರೆ ಇನ್ನು ಕೂಡ ಒಪ್ಪುವೆ: ಹಸೀನಾ
ಭಾರತೀಯ ಕ್ರಿಕೆಟರ್ ಹಾಗೂ ಪತಿ ಮೊಹಮ್ಮದ್ ಶಮಿ ವಿರುದ್ಧ ಆರೋಪ ಮುಂದುವರಿಸಿರುವ ಹಸೀನ್ ಜಹಾನ್...

ನವದೆಹಲಿ; ಭಾರತೀಯ ಕ್ರಿಕೆಟರ್ ಹಾಗೂ ಪತಿ ಮೊಹಮ್ಮದ್ ಶಮಿ ವಿರುದ್ಧ ಆರೋಪ ಮುಂದುವರಿಸಿರುವ ಹಸೀನ್ ಜಹಾನ್, ವೈವಾಹಿಕ ಜೀವನವನ್ನು ಉಳಿಸಲು ತನ್ನಿಂದಾದ ಪ್ರಯತ್ನ ಮಾಡಿದ್ದೇನೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆಯುವವರೆಗೂ ವೈವಾಹಿಕ ಜೀವನವನ್ನು ಉಳಿಸಲು ಶಮಿ ಅವರಿಗೆ ಸಾಕಷ್ಟು ಬಾರಿ ಮನವೊಲಿಸಿದ್ದೆ. ಆದರೆ ಪ್ರಯೋಜನವಾಗಲಿಲ್ಲ. ಅವರು ಮತ್ತೆ ನನ್ನ ಜೀವನದಲ್ಲಿ ಬರುವುದಾದರೆ ಪರಿಗಣಿಸಲು ತಯಾರಿದ್ದೇನೆ ಎಂದು ಹಸೀನ್ ಜಹನ್ ಹೇಳಿದ್ದಾರೆ.
ಆರೋಪಗಳಿಂದ ಮುಕ್ತರಾಗಲು ಶಮಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆತನ ಮೊಬೈಲ್ ಫೋನ್ ಸಿಗುತ್ತಿಲ್ಲದಿದ್ದರೆ ಓಡಿಹೋಗುತ್ತಿದ್ದರು. ತನ್ನ ತಪ್ಪುಗಳನ್ನು ಒಪ್ಪಿಕೊಂಡು ಮತ್ತೆ ಒಟ್ಟಿಗೆ ಸಂತೋಷವಾಗಿ ಬಾಳೋಣವೆಂದು ಅವರ ಮನವೊಲಿಸಲು ಪ್ರಯತ್ನಿಸಿದ್ದೆ. ಹಲವು ಸಮಯಗಳ ಕಾಲ ಕಾದಿದ್ದೆ. ನನಗೆ ಮೊಬೈಲ್ ಫೋನ್ ಸಿಗದಿದ್ದರೆ ಅವರು ಉತ್ತರ ಪ್ರದೇಶಕ್ಕೆ ಓಡಿ ಹೋಗುತ್ತಿದ್ದರು. ಮೊಬೈಲ್ ಫೋನ್ ಸಿಗದಿರುತ್ತಿದ್ದರೆ ಇಷ್ಟು ಹೊತ್ತಿಗೆ ನನಗೆ ವಿಚ್ಛೇದನ ನೀಡಿ ಆಗುತ್ತಿತ್ತು ಎಂದು ಹಸೀನಾ ಆರೋಪಿಸಿದ್ದಾರೆ.
ಹಸೀನಾ ಈಗಾಗಲೇ ಮೊಹಮ್ಮದ್ ಶಮಿ ವಿರುದ್ಧ ಕೊಲೆ ಯತ್ನ, ವಿವಾಹೇತರ ಸಂಬಂಧ ಮತ್ತು ಗೃಹಹಿಂಸೆಯ ಕೇಸು ದಾಖಲಿಸಿದ್ದಾರೆ. ಕೇಸಿಗೆ ಸಂಬಂಧಪಟ್ಟಂತೆ ಈಗಾಗಲೇ ಶಮಿ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


