ಹಾಕಿ ಚಾಂಪಿಯನ್ಸ್ ಟ್ರೋಫಿ: 2-1 ಅಂತರದಿಂದ ಅರ್ಜೆಂಟಿನ ವಿರುದ್ಧ ಭಾರತದ ಗೆಲುವು
ನೆದರ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಗೆಲುವನ್ನು ಮುಂದುವರೆಸಿದ್ದು, ಅರ್ಜೆಂಟಿನಾ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿದೆ.

Published On :
ನೆದರ್ಲ್ಯಾಂಡ್ಸ್: ನೆದರ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಗೆಲುವನ್ನು ಮುಂದುವರೆಸಿದ್ದು, ಅರ್ಜೆಂಟಿನಾ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿದೆ.
ಜೂ.23 ರಂದು ನಡೆದ ಪಂದ್ಯದಲ್ಲಿ ಭಾರತ ಪಾಕ್ ವಿರುದ್ಧ 4-0 ಅಂತರದಿಂದ ಗೆದ್ದಿತ್ತು. ಜೂ.24 ರಂದು ನಡೆದ ಪಂದ್ಯದಲ್ಲಿ ಭಾರತ 2-1 ಅಂತರದಿಂದ ಗೆದ್ದಿದೆ. ಎರಡನೇ ಕ್ವಾರ್ಟರ್ ವರೆಗೂ ಗೋಲ್ ದಾಖಲಿಸಲು ಹೆಣಗುತ್ತಿದ್ದ ಭಾರತಕ್ಕೆ ಹರ್ಮನ್ಪ್ರೀತ್ ಸಿಂಗ್ 17 ನೇ ನಿಮಿಷದಲ್ಲಿ ಗೋಲ್ ದಾಖಲಿಸಲು ನೆರವಾದರು. ನಂತರ ಮನ್ದೀಪ್ ಸಿಂಗ್ 28 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ 2 ನೇ ಗೋಲ್ ದಾಖಲಿಸಿದರು.
ವಿಶ್ವದಲ್ಲಿ 2ನೇ ಶ್ರೇಷ್ಠ ಹಾಕಿ ತಂಡವಾಗಿರುವ ಅರ್ಜೆಂಟೀನಾ 30 ನೇ ನಿಮಿಷದಲ್ಲಿ ಭಾರತದ ವಿರುದ್ಧ ಕೇವಲ ಒಂದು ಗೋಲ್ ದಾಖಲಿಸಿ ಭಾರತದ ವಿರುದ್ಧ ಸೋಲೊಪ್ಪಿಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


