ಕ್ರೀಡೆ

ಚಾಂಪಿಯನ್ಸ್ ಟ್ರೋಫಿ: 4-0 ಅಂತರಿಂದ ಪಾಕಿಸ್ತಾನವನ್ನು ಮಣಿಸಿದ ಭಾರತ ಹಾಕಿ ತಂಡ

ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಹಾಕಿ ತಂಡ ಪಾಕಿಸ್ತಾನ ತಂಡವನ್ನು 4-0 ಗೋಲುಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ.

ಚಾಂಪಿಯನ್ಸ್ ಟ್ರೋಫಿ: 4-0 ಅಂತರಿಂದ ಪಾಕಿಸ್ತಾನವನ್ನು ಮಣಿಸಿದ ಭಾರತ ಹಾಕಿ ತಂಡ
ಚಾಂಪಿಯನ್ಸ್ ಟ್ರೋಫಿ: 4-0 ಅಂತರಿಂದ ಪಾಕಿಸ್ತಾನವನ್ನು ಮಣಿಸಿದ ಭಾರತ ಹಾಕಿ ತಂಡ
Published On :
ನೆದರ್ಲ್ಯಾಂಡ್ಸ್: ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಹಾಕಿ ತಂಡ ಪಾಕಿಸ್ತಾನ ತಂಡವನ್ನು 4-0 ಗೋಲುಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ. 
ನೆದರ್ಲ್ಯಾಂಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಹಾಫ್ ಟೈಮ್ ಬ್ರೇಕ್ ನ ವೇಳೆಗೆ 1-0 ಅಂತರದಿಂದ ಪಾಕ್ ವಿರುದ್ಧ ಮೇಲುಗೈ ಸಾಧಿಸಿತ್ತು, ನಂತರ ಫೈನಲ್ ಕ್ವಾರ್ಟರ್ ನಲ್ಲಿ ಮೂರು ಗೋಲುಗಳನ್ನು ದಾಖಲಿಸಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. 
ಭಾರತದ ಪರ ರಮಣ್ ದೀಪ್ ಸಿಂಗ್, ದಿಲ್ಪ್ರೀತ್ ಸಿಂಗ್, ಮನ್ದೀಪ್ ಸಿಂಗ್ ಹಾಗೂ ಲಲಿತ್ ಉಪಾಧ್ಯಾಯ ಗೋಲ್ ಗಳನ್ನು ದಾಖಲಿಸಿದ್ದಾರೆ. 25 ನೇ ನಿಮಿಷದಲ್ಲಿ ರಮಣ್ ದೀಪ್ ಭಾರತದ ಪರ 1-0 ಗೋಲುಗಳನ್ನು ದಾಖಲಿಸಿದರು. ಆದರೆ ಮೂರನೇ ಕ್ವಾರ್ಟರ್ ವರೆಗೂ ಭಾರತ ಮತ್ತೊಂದು ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ, 54 ನೇ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್ ದಾಖಲಿಸಿದ ಗೋಲ್ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿತು. 
57ನೇ ನಿಮಿಷದಲ್ಲಿ ಮನ್ದೀಪ್ ಗಳಿಸಿದ ಗೋಲ್ ಹಾಗೂ ಅಂತಿಮವಾಗಿ ಲಲಿತ್ ದಾಖಲಿಸಿದ ಗೋಲ್ ಭಾರತ ಪಾಕ್ ವಿರುದ್ಧ 4-0 ಅಂತರದಿಂದ ಗೆಲ್ಲಲು ನೆರವಾಯಿತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.