ಬ್ಯಾಡ್ಮಿಂಟನ್: ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಲಕ್ಷಯ ಸೇನ್ ಗೆ ಚಿನ್ನ
ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷಯ ಸೇನ್ ಚಿನ್ನದ ಪದಕ ಜಯಿಸಿದ್ದಾರೆ.

Published On :
ಜಕಾರ್ತಾ: ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷಯ ಸೇನ್ ಚಿನ್ನದ ಪದಕ ಜಯಿಸಿದ್ದಾರೆ.
ಇಂಡೋನೇಷಿಯಾದ ಅಗ್ರ ಶ್ರೇಯಾಂಕಿತ ಆಟಗಾರ ಕುನ್ಲವುತ್ ವಿಟಿದಾರನ್ ಅವರ ವಿರುದ್ಧ 21-19, 21-18 ಅಂತರದ ಗೆಲುವು ಸಾಧಿಸಿದ ಸೇನ್ ಆರು ವರ್ಷದ ಬಳಿಕ ದೇಶಕ್ಕೆ ಚೊನ್ನದ ಪದಕ ಗಳಿಸಿಕೊಟ್ಟಿದ್ದಾರೆ.
ಪ್ರಾರಂಭದಲ್ಲಿ ನಿಧಾನಗತಿಯಲ್ಲಿ ಆಟವಾಡಿದರೂ ಮುಂದೆ ಎದುರಾಳಿ ಮೇಲೆ ಉತ್ತಮ ಹಿಡಿತ ಸಾಧಿಸಿದ ಲಕ್ಷಯ ಸೇನ್ ಅಂತಿಮವಾಗಿ ವಿಜಯ ಮಾಲೆ ಧರಿಸುವಲ್ಲಿ ಸಫಲವಾದರು.
ಇದಕ್ಕೂ ಮುನ್ನ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಪದಕಗಳನ್ನು ಗೆದ್ದ ಭಾರತಿಯ ಆಟಗಾರರ ಪಟ್ಟಿ ಹೀಗಿದೆ-
- ಗೌತಮ್ ಠಾಕೂರ್ - ಚಿನ್ನ- 1965
- ಪ್ರಣವ್ ಚೋಪ್ರಾ/ ಪ್ರಜ್ಕ್ತಾ ಸಾವಂತ್ - ಕಂಚು - 2009
- ಸಮೀರ್ ವರ್ಮಾ -ಬೆಳ್ಳಿ - 2011
- ಪಿವಿ ಸಿಂಧೂ - ಕಂಚು - 2011
- ಪಿವಿ ಸಿಂಧೂ - ಚಿನ್ನ - 2012
- ಸಮೀರ್ ವರ್ಮಾ - ಕಂಚು - 2012
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indonesiaಇಂಡೋನೇಷ್ಯಾLakshaya Sen. Badminton Asia Junior Championshipಲಕ್ಷಯ ಸೇನ್ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್ಷಿಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


