ಕ್ರೀಡೆ

ಎಫ್ಐಎಚ್ ಹಾಕಿ ಶ್ರೇಯಾಂಕ: ಜರ್ಮನಿಯನ್ನು ಹಿಂದಿಕ್ಕಿದ ಭಾರತಕ್ಕೆ 5ನೇ ಸ್ಥಾನ

ಅಂತರಾಷ್ಟ್ರೀಯ ಹಾಕಿ ಫೆಡರೇಏಷನ್ ಮಂಗಳವಾರ ಬಿಡುಗಡೆ ಮಾಡಿದ ನೂತನ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಪುರುಷರ ಹಾಕಿ ತಂಡ 5ನೇ ಸ್ಥಾನಕ್ಕೆ ಏರಿದೆ.

ಎಫ್ಐಎಚ್ ಹಾಕಿ ಶ್ರೇಯಾಂಕ: ಜರ್ಮನಿಯನ್ನು ಹಿಂದಿಕ್ಕಿದ ಭಾರತಕ್ಕೆ 5ನೇ ಸ್ಥಾನ
ಎಫ್ಐಎಚ್ ಹಾಕಿ ಶ್ರೇಯಾಂಕ: ಜರ್ಮನಿಯನ್ನು ಹಿಂದಿಕ್ಕಿದ ಭಾರತಕ್ಕೆ 5ನೇ ಸ್ಥಾನ
Published On :
ನವದೆಹಲಿ: ಅಂತರಾಷ್ಟ್ರೀಯ ಹಾಕಿ ಫೆಡರೇಏಷನ್ ಮಂಗಳವಾರ ಬಿಡುಗಡೆ ಮಾಡಿದ ನೂತನ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಪುರುಷರ ಹಾಕಿ ತಂಡ  5ನೇ ಸ್ಥಾನಕ್ಕೆ ಏರಿದೆ.
ಇತ್ತೀಚೆಗೆ ನೆದರ್ಲ್ಯಾಂಡ್ ನಲ್ಲಿ ನಡೆದಿದ್ದ  ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಸತತ ಎರಡನೇ ಬಾರಿ ರನ್ನರ್ ಅಪ್ ಸ್ಥಾನ ಗಳಿಸಿಕೊಂಡಿತ್ತು.
ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡ ಆಸ್ಟ್ರೇಲಿಯಾ ಅಗ್ರ ಶ್ರೇಯಾಂಕಿತವಾಗಿ ಹೊರಹೊಮ್ಮಿದೆ. 
ಭಾರತವು 1484 ಅಂಕಗಳೊಡನೆ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ ಐದನೇ ಶ್ರೇಯಾಂಕ ಪಡೆದಿದೆ. ಜರ್ಮನಿಯನ್ನು ಹಿಂದಿಕ್ಕಿರುವ ಭಾರತ ಈ ಸಾಧನೆ ಮಾಡಿದೆ.
ಟಾಪ್ 10 ಪಟ್ಟಿಯು ಇಂತಿದೆ- 
  1. ಆಸ್ಟ್ರೇಲಿಯಾ (1906)
  2. ಅರ್ಜೆಂಟೈನಾ (1883)
  3. ಬೆಲ್ಜಿಯಂ (1709)
  4. ನೆದರ್ಲೆಂಡ್ಸ್ (1654
  5. ಭಾರತ (1484)
  6. ಜರ್ಮನಿ (1456) 
  7. ಇಂಗ್ಲೆಂಡ್ (1220)
  8. ಸ್ಪೇನ್ (1105)
  9. ನ್ಯೂಝಿಲ್ಯಾಂಡ್ (1103)
  10. ಐರ್ಲೆಂಡ್ (910)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.