ಕ್ರೀಡೆ

ಹಿಮಾ ದಾಸ್ ಕುರಿತು 'ಸಿಲ್ಲಿ ಟ್ವೀಟ್' ಮಾಡಿ ಎಡವಟ್ಟು ಮಾಡಿಕೊಂಡ ಅಥ್ಲೆಟಿಕ್ಸ್ ಫೆಡರೇಶನ್

ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ -20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ...

ಹಿಮಾ ದಾಸ್ ಕುರಿತು 'ಸಿಲ್ಲಿ ಟ್ವೀಟ್' ಮಾಡಿ ಎಡವಟ್ಟು ಮಾಡಿಕೊಂಡ ಅಥ್ಲೆಟಿಕ್ಸ್ ಫೆಡರೇಶನ್
ಹಿಮಾ ದಾಸ್
Published On :

ನವದೆಹಲಿ: ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ -20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಅಸ್ಸಾಂ ಹುಡುಗಿ ಹಿಮಾ ದಾಸ್ ನ್ನು ಇಡೀ ಭಾರತವೇ ಇಂದು ಕೊಂಡಾಡುತ್ತಿದೆ.
ಈಕೆಯ ಕುರಿತು ಮೊನ್ನೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮಾಡಿದ್ದ ಒಂದು ಟ್ವೀಟ್ ನಿಂದ ಭಾರತೀಯರ ಸಿಟ್ಟು, ಆಕ್ರೋಶಕ್ಕೆ ಕಾರಣವಾಗಿ ಕೊನೆಗೆ ಕ್ಷಮೆ ಕೇಳಿದ್ದೂ ಆಯಿತು.

ಎರಡು ದಿನಗಳ ಹಿಂದೆ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲ ಸ್ಥಾನ ಗಳಿಸಿ ಅಂತಿಮ ಸುತ್ತು ಪ್ರವೇಶಿಸಿ ಚಿನ್ನದ ಪದಕ ಬೇಟೆಗೆ ಸಿದ್ಧರಾಗಿದ್ದ ಹಿಮಾ ದಾಸ್ ಗೆ ಅಭಿನಂದನೆ ಸಲ್ಲಿಸಿ ಪ್ರೋತ್ಸಾಹಿಸುವುದು ಬಿಟ್ಟು ಆಕೆಗೆ ಇಂಗ್ಲಿಷ್ ಮಾತನಾಡಲು ಅಷ್ಟು ಚೆನ್ನಾಗಿ ಬರುವುದಿಲ್ಲ ಎಂಬುದನ್ನು ಟ್ವೀಟ್ ನಲ್ಲಿ ಅಥ್ಲೆಟಿಕ್ಸ್ ಫೆಡರೇಶನ್ ಒತ್ತಿ ಹೇಳಿದಂತೆ ಕಂಡುಬಂದಿದ್ದು ಸುಳ್ಳಲ್ಲ.

ಹಿಮಾ ದಾಸ್ ಗೆ ಇಂಗ್ಲಿಷ್ ಸರಾಗವಾಗಿ ಮಾತನಾಡಲು ಬಾರದಿದ್ದರೂ ಕೂಡ ಉತ್ತಮ ಸಾಧನೆ ತೋರಿದ್ದಾಳೆ. ಆಕೆಗೆ ಬೆಸ್ಟ್ ವಿಶಸ್ ಎಂದು ಹೇಳಿ ಅಥ್ಲೆಟಿಕ್ಸ್ ಫೆಡರೇಶನ್ ಟ್ವೀಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಅದಕ್ಕೆ ಟೀಕೆಗಳು ಸಾಕಷ್ಟು ವ್ಯಕ್ತವಾದವು. ಈ ಸಂದರ್ಭದಲ್ಲಿ ಇಂತಹ ಟ್ವೀಟ್ ಬೇಕಾಗಿರಲಿಲ್ಲ, ಆಕೆಯ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸುವುದು ಬಿಟ್ಟು  ಅಪ್ರಸ್ತುತ ಮಾತುಗಳನ್ನು ಏಕೆ ಆಡಬೇಕು ಎಂದು ಜನರು ಟೀಕಿಸಿ ಟ್ವೀಟ್ ಮಾಡುತ್ತಿದ್ದರು.

ನಂತರ ಇದಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಕ್ಷಮೆ ಕೇಳಿದ್ದೂ ಆಯಿತು. ಹಿಮಾಳ ಇಂಗ್ಲಿಷ್ ಭಾಷೆಯನ್ನು ಕೆಣಕುವುದು ನಮ್ಮ ಉದ್ದೇಶವಾಗಿರಲಿಲ್ಲ. ನ್ಯೂನತೆ ನಡುವೆಯೂ ಅವರ ಉತ್ಸಾಹ, ಸ್ಫೂರ್ತಿ ಮೈದಾನದ ಒಳಗೆ ಮತ್ತು ಹೊರಗೆ ಕಡಿಮೆಯಾಗಿಲ್ಲ ಎಂದು ಹೇಳುವುದು ನಮ್ಮ ಉದ್ದೇಶವಾಗಿತ್ತು ಎಂದು ಟ್ವೀಟ್ ಮಾಡಿ ಸಮಜಾಯಿಷಿ ನೀಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.