ಕ್ರೀಡೆ

ವರ್ಲ್ಡ್ ಟೂರ್ ಫೈನಲ್: ನೊಜೊಮಿ ಒಕುಹರಾ ಮಣಿಸಿದ ಸಿಂಧೂಗೆ ಚೊಚ್ಚಲ ಚಾಂಪಿಯನ್ ಪಟ್ಟ

ನಾದಲ್ಲಿ ನಡೆಯಿತ್ತಿರುವ ಬಿಡಬ್ಲ್ಯುಎಫ್ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟಗಾರ್ತಿ ಪಿವಿ ಸಿಂಧೂ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ

ವರ್ಲ್ಡ್ ಟೂರ್ ಫೈನಲ್:  ನೊಜೊಮಿ ಒಕುಹರಾ ಮಣಿಸಿದ ಸಿಂಧೂಗೆ ಚೊಚ್ಚಲ ಚಾಂಪಿಯನ್ ಪಟ್ಟ
ಪಿವಿ ಸಿಂಧೂ
Published On :
ಗುವಾಂಗ್ ಜೌ: ಚೀನಾದಲ್ಲಿ ನಡೆಯಿತ್ತಿರುವ ಬಿಡಬ್ಲ್ಯುಎಫ್ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟಗಾರ್ತಿ ಪಿವಿ ಸಿಂಧೂ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌ 2018 ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ ಪ್ರಥಮ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜಪಾನ್‌ನ ನೊಜೊಮಿ ಒಕುಹರಾ ವಿರುದ್ಧ 21-19, 21-17 ಸೆಟ್ ಗಳ ಅಂತರದಲ್ಲಿ ಸಿಂಧೂ ಜಯಗಳಿಸಿದ್ದಾರೆ.
ಹೈದರಾಬಾದ್ ಮೂಲದ ಸಿಂಧೂ ಮೂರನೇ ಬಾರಿ ಈ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದು ಚೊಚ್ಚಲ ಬಾರಿಗೆ ಪ್ರಶಸ್ತಿ ಗಳಿಸಿದ್ದಾರೆ. 
ಈ ಮುನ್ನ ಶನಿವಾರ ನಡೆದಿದ್ದ ಪಂದ್ಯದಲ್ಲಿ ಸಿಂಧೂ 2013ರ ಸಾಲಿನ ಚಾಂಪಿಯನ್ ಇಂಡೋನೇಷಿಯಾದ ಆಟಗಾರ್ತಿ ರಾಚ್ಟಾನೋಕ್ ಇಂಟನಾನ್ ಅವರನ್ನು ಮಣಿಸಿ ಫೈನಲ್ ಗೆ ಪ್ರವೇಶಿಸಿದ್ದರು.
2016ರ ರಿಯೊ ಒಲಿಂಪಿಕ್ಸ್‌, ಸೇರಿ ಅನೇಕ ಟೂರ್ನಿಗಳಲ್ಲಿ ಫೈನಲ್ ತಲುಪಿದ್ದರೂ ಕಡೆ ಕ್ಷಣದಲ್ಲಿ ಸೋಲು ಕಾಣುತ್ತಿದ್ದ ಸಿಂಧೂ ಈ ಬಾರಿ ವಿಜೇತರಾಗಿದ್ದು ಕಡೆಗೂ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.