ಕ್ರೀಡೆ

ಏಷ್ಯನ್ ಗೇಮ್ಸ್ ಬಾಕ್ಸಿಂಗ್: ನಾಲ್ಕರ ಹಂತಕ್ಕೆ ವಿಕಾಸ್, ಅಮಿತ್ ಲಗ್ಗೆ, ದೇಶಕ್ಕೆ ಇನ್ನೆರಡು ಪದಕ ಖಾತ್ರಿ!

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಹದಿನೆಂತನೇ ಆವೃತ್ತಿಯ ಏಷ್ಯನ್ ಕ್ರಿಡಾಕೂಟದ ಹನ್ನೊಂದನೇ ದಿನ ಭಾರತದ ಬಾಕ್ಸರ್ ಗಳಾದ ಅಮಿತ್ ಪಂಘಲ್ ಮತ್ತು ವಿಕಾಸ್ ಕ್ರಿಶನ್ ಬಾಕ್ಸಿಂಗ್ ಸೆಮಿಫೈನಲ್ಸ್....

ಏಷ್ಯನ್ ಗೇಮ್ಸ್ ಬಾಕ್ಸಿಂಗ್: ನಾಲ್ಕರ ಹಂತಕ್ಕೆ ವಿಕಾಸ್, ಅಮಿತ್ ಲಗ್ಗೆ, ದೇಶಕ್ಕೆ ಇನ್ನೆರಡು ಪದಕ ಖಾತ್ರಿ!
ವಿಕಾಸ್ ಕ್ರಿಶನ್ ಮತ್ತು ಅಮಿತ್ ಪಂಘಲ್
Published On :
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಹದಿನೆಂತನೇ ಆವೃತ್ತಿಯ ಏಷ್ಯನ್ ಕ್ರಿಡಾಕೂಟದ ಹನ್ನೊಂದನೇ ದಿನ ಭಾರತದ ಬಾಕ್ಸರ್ ಗಳಾದ ಅಮಿತ್ ಪಂಘಲ್ ಮತ್ತು  ವಿಕಾಸ್ ಕ್ರಿಶನ್ ಬಾಕ್ಸಿಂಗ್ ಸೆಮಿಫೈನಲ್ಸ್ ತಲುಪುವ ಮೂಲಕ ಪದಕವನ್ನು ಖಾತ್ರಿಪಡಿಸಿಕೊಂಡಿದ್ದಾರೆ.
ಅಮಿತ್ ಪಂಘಲ್ 49 ಕೆಜಿ ವಿಭಾಗ ಪಂದ್ಯದಲ್ಲಿ ಸೆಮೀಸ್ ಗೆ ಪ್ರವೇಶಿಸಿದರೆ 75 ಕೆ.ಜಿ ವಿಭಾಗದಲ್ಲಿ ವಿಕಾಸ್ ನಾಲ್ಕರ ಹಂತಕ್ಕೇರಿದರು.
ಹರಿಯಾಣ ಮೂಲದ ಅಮಿತ್ ಬುಧವಾರ ನಡೆದ ಕ್ವಾರ್ಟರ್ ಫೈನಲ್ಸ್ ನಲ್ಲಿ  ದಕ್ಷಿಣ ಕೊರಿಯಾದ ಕಿಮ್ ಜಂಗ್ ರಾಯೊಂಗ್ ಅವರನ್ನು 5-0 ಅಂತರದಲ್ಲಿ ಪರಾಭವಗೊಳಿಸಿದ್ದರು.
ಕಾಮನ್ವೆಲ್ತ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತರಾದ ಅಮಿತ್ ತಮ್ಮ ಮುಂದಿನ ಸುತ್ತಿನಲ್ಲಿ ಫಿಲಿಪ್ಪೈನ್ಸ್‍ನ ಕಾರ್ಲೊ ಪಾಲಂ ಅವರನ್ನು ಎದುರಿಸಬೇಕಿದೆ.
ಇನ್ನು ವಿಕಾಸ್ ಕ್ರಿಶನ್ ಚೀನಾದ ತುವಾಹೆಟಾ ಎರ್ಬಕೆ ತ್ಯಾಂಗ್ಲಾತಿಹಾನ್ ಅವರನ್ನು  3-2 ಅಂತರದಲ್ಲಿ ಸೋಲಿಸಿ ಮುಂದಿನ ಘಟ್ಟ ಪ್ರವೇಶಿಸಿದ್ದಾರೆ.
ಈ ಮುನ್ನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದ ವಿಕಾಸ್ ತಮ್ಮ ಮುಂದಿನ ಸುತ್ತಿನಲ್ಲಿ  ಕಝಾಕಿಸ್ತಾನದ ಅಬಿಲ್ಖನ್ ಅಮಂಕುಲ್ ಅವರೊಡನೆ ಸೆಣಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.