ಏಷ್ಯನ್ ಗೇಮ್ಸ್ 2018: ಪದಕ ಗೆದ್ದ ಖುಷಿ ಕ್ಷಣ ಮಾತ್ರದಲ್ಲೇ ಮಣ್ಣಾಯ್ತು!
ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ 10,000 ಮೀಟರ್ ಓಟದಲ್ಲಿ ಲಕ್ಷ್ಮಣನ್ ಗೋವಿಂದನ್ ಗೆದ್ದಿದ್ದ ಕಂಚಿನ ಪದಕ ಅಸಿಂಧು ಎಂದು ಘೋಷಿಸಲಾಗಿದೆ...

Published On :
ಜಕಾರ್ತ: ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ 10,000 ಮೀಟರ್ ಓಟದಲ್ಲಿ ಲಕ್ಷ್ಮಣನ್ ಗೋವಿಂದನ್ ಗೆದ್ದಿದ್ದ ಕಂಚಿನ ಪದಕ ಅಸಿಂಧು ಎಂದು ಘೋಷಿಸಲಾಗಿದೆ.
ಇಂದು ನಡೆದ 10,000 ಮೀಟರ್ ಪುರುಷರ ಓಟದಲ್ಲಿ ಲಕ್ಷ್ಮಣನ್ ಗೋವಿಂದನ್ 29 ನಿಮಿಷ 44.91 ಸೆಕೆಂಡ್ ನಲ್ಲಿ ಗುರಿ ಮುಟ್ಟಿದ್ದರು. ಇದರೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪಡೆದಿದ್ದರು.
ಆದರೆ ಅಧಿಕಾರಿಗಳು ಓಟದ ಮರು ವೀಕ್ಷಣೆಯನ್ನು ನೋಡಿದಾಗ ಲಕ್ಷ್ಮಣನ್ ಕಾಲು ಗೆರೆಯಿಂದ ಹಿಂದಿರುವುದನ್ನು ಕಂಡು ಅವರಿಗೆ ನೀಡಲಾಗಿದ್ದ ಕಂಚಿನ ಪದಕವನ್ನು ಹಿಂಪಡೆದಿದ್ದಾರೆ.
ಇನ್ನು 10,000 ಮೀಟರ್ ಓಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಚೀನಾದ ಚಾಂಗ್ಹಾಂಗ್ ಝಾವೋ ಇದೀಗ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian athletesಭಾರತೀಯ ಅಥ್ಲೀಟ್ಸ್Asian Games 2018ಏಷ್ಯನ್ ಗೇಮ್ಸ್ 2018Lakshmanan Govindanಲಕ್ಷ್ಮಣನ್ ಗೋವಿಂದನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


