ಕ್ರೀಡೆ

ಏಷ್ಯಾಡ್ 2018 ಈಕ್ವೆಸ್ಟ್ರಿಯನ್ ನಲ್ಲಿ ಎರಡು ಬೆಳ್ಳಿ ಪದಕ ಗಳಿಸಿದ ಭಾರತ ಐತಿಹಾಸಿಕ ದಾಖಲೆ!

ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018ರ 8ನೇ ದಿನವಾದ ಭಾನುವಾರ ಭಾರತ ಮತ್ತೆರಡು ಬೆಳ್ಳಿ ಪದಕ ಗಳಿಸಿದೆ.

ಏಷ್ಯಾಡ್ 2018  ಈಕ್ವೆಸ್ಟ್ರಿಯನ್ ನಲ್ಲಿ ಎರಡು ಬೆಳ್ಳಿ ಪದಕ ಗಳಿಸಿದ ಭಾರತ ಐತಿಹಾಸಿಕ ದಾಖಲೆ!
ಮಿರ್ಜಾ ಫೌದ್
Published On :
ಜಕಾರ್ತಾ: ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018ರ 8ನೇ ದಿನವಾದ ಭಾನುವಾರ ಭಾರತ ಮತ್ತೆರಡು ಬೆಳ್ಳಿ ಪದಕ ಗಳಿಸಿದೆ.
ಈಕ್ವೆಸ್ಟ್ರಿಯನ್ ಕ್ರೀಡಾ ವಿಭಾಗದಲ್ಲಿ ಭಾರತದ ಮಿರ್ಜಾ ಫೌದ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ.
ಈ ವಿಭಾಗದಲ್ಲಿ ಜಪಾನ್ ನ ಯೋಶಿಕಿ ಚಿನ್ನ ಗಳಿಸಿದರೆ ಥೈಲ್ಯಾಂಡ್ ನ ಕ್ರೀಡಾಪಟು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಮಿರ್ಜಾ ಫೌದ್  ಬೆಳ್ಳಿ ಪರಕದ ಮೂಲಕ 1982ರ ಏಷ್ಯನ್ ಗೇಮ್ಸ್ ನಂತರ ಭಾರತ ಇದೇ ಪ್ರಥಮ ಬಾರಿಗೆ ಈಕ್ವೆಸ್ಟ್ರಿಯನ್ ಸ್ಪರ್ಧೆಯ ವೈಯುಕ್ತಿಕ ವಿಭಾಗದಲ್ಲಿ ಪದಕ ಗಳಿಸಿದೆ.
ಇನ್ನು ಇದೇ ಸ್ಪರ್ಧೆಯ ಟೀಂ ವಿಭಾಗದಲ್ಲಿಯೂ ಬಾರತ 121.30 ಅಂಕ ಗಳಿಸಿಕೊಳ್ಳುವ ಮೂಲಕ ಇನ್ನೊಂದು ಬೆಳ್ಳಿ ಪದಕ ಜಯಿಸಿದೆ.
ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 7 ಚಿನ್ನ, 7 ಬೆಳ್ಳಿ, 17 ಕಂಚಿನ ಪದಕಗಳೊಡನೆ ಒಟ್ಟು 31 ಪದಕ ಗಳಿಸಿ ಸಾಧನೆ ಮೆರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.