ಕ್ರೀಡೆ

ಏಷ್ಯನ್ ಗೇಮ್ಸ್ 2018: ರೋಯಿಂಗ್‌ನಲ್ಲಿ ಭಾರತಕ್ಕೆ 1 ಚಿನ್ನ, 2 ಕಂಚು!

2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪುಟಗಳು ಚಿನ್ನದ ಬೇಟೆ ಮುಂದುವರೆಸಿದ್ದಾರೆ. ಕ್ವಾಡ್ರುಪಲ್ ಸ್ಕಲ್ಸ್ ರೋಯಿಂಗ್ ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗೆದ್ದಿದೆ...

ಏಷ್ಯನ್ ಗೇಮ್ಸ್ 2018: ರೋಯಿಂಗ್‌ನಲ್ಲಿ ಭಾರತಕ್ಕೆ 1 ಚಿನ್ನ, 2 ಕಂಚು!
ಭಾರತೀಯ ರೋವರ್ಸ್
Published On :
ಜಕಾರ್ತ: 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪುಟಗಳು ಚಿನ್ನದ ಬೇಟೆ ಮುಂದುವರೆಸಿದ್ದಾರೆ. ಕ್ವಾಡ್ರುಪಲ್ ಸ್ಕಲ್ಸ್ ರೋಯಿಂಗ್ ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗೆದ್ದಿದೆ. 
ಭಾರತೀಯ ಕ್ರೀಡಾಪಟುಗಳಾದ ಸವರಣ್ ಸಿಂಗ್, ದತ್ತು ಭೋಕನಲ್, ಓಂ ಪ್ರಕಾಶ್ ಹಾಗೂ ಸುಖಮಿತ್ ಕ್ವಾಡ್ರುಪಲ್ ಸ್ಕಲ್ಸ್ ರೋಯಿಂಗ್ ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದು ಈ ಮೂಲಕ ಭಾರತ ಐದನೇ ಚಿನ್ನದ ಪದಕವನ್ನು ಗೆದ್ದಿದೆ. 
ಇನ್ನು ಕಡಿಮೆ ಗಾತ್ರದ ಡಬಲ್ ಸ್ಕಲ್ಸ್ ರೋಯಿಂಗ್ ನಲ್ಲಿ ರೋಹಿತ್ ಕುಮಾರ್ ಹಾಗೂ ಭಗವಾನ್ ದಾಸ್ ಮತ್ತು ಕಡಿಮೆ ಗಾತ್ರದ ಸಿಂಗಲ್ ರೋಯಿಂಗ್ ನಲ್ಲಿ ದುಶ್ಯಂತ್ ಕಂಚು ಪದಕ ಜಯಿಸಿದ್ದಾರೆ. 
ಭಾರತ ಇಲ್ಲಿಯವರೆಗೂ 5 ಚಿನ್ನ, 4 ಬೆಳ್ಳಿ ಮತ್ತು 12 ಕಂಚಿನ ಪದಕ ಗೆಲ್ಲುವ ಮೂಲಕ ಒಟ್ಟಾರೆ 21 ಪದಕಗಳನ್ನು ಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.