ಕ್ರೀಡೆ

ಏಷ್ಯಾಡ್ ಡಬಲ್ ಟ್ರ್ಯಾಪ್ ಶೂಟಿಂಗ್: 15ರ ಹರೆಯದ ಶರ್ದುಲ್ ವಿಹಾನ್ ಗೆ ರಜತ ಮಾಲೆ!

18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್ವಿಭಾಗದಲ್ಲಿ 15ರ ಹರೆಯದ ಭಾರತೀಯ ಶೂಟರ್ ಶರ್ದುಲ್ ವಿಹಾನ್ ಬೆಳ್ಳಿಪದಕ ಜಯಿಸಿದ್ದಾರೆ.

ಏಷ್ಯಾಡ್ ಡಬಲ್ ಟ್ರ್ಯಾಪ್ ಶೂಟಿಂಗ್: 15ರ ಹರೆಯದ ಶರ್ದುಲ್ ವಿಹಾನ್ ಗೆ ರಜತ ಮಾಲೆ!
ಶರ್ದುಲ್ ವಿಹಾನ್
Published On :
ಪಾಲೆಂಬಂಗ್: 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ 15ರ ಹರೆಯದ ಭಾರತೀಯ ಶೂಟರ್ ಶರ್ದುಲ್ ವಿಹಾನ್ ಬೆಳ್ಳಿಪದಕ ಜಯಿಸಿದ್ದಾರೆ.
ಉತ್ತರ ಪ್ರದೇಶದ ಶಾರ್ದೂಲ್ 73 ಅಂಕಗಳೊಡನೆ ಬೆಳ್ಳಿ ಜಯಿಸಿದ್ದಾರೆ. ಇದಕ್ಕಿಂತ ಒಂದೇ ಅಂಕ ಹೆಚ್ಚು (74) ಗಳಿಸಿದ್ದ (ಕೊರಿಯಾದ 34 ರ ಹರೆಯದ ಶಿನ್ ಹ್ಯುನ್ವೂ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಕಳೆದ ವರ್ಷ ನಡೆದಿದ್ದ ಶೂಟ್ ಗನ್ ನ್ಯಾಷನಲ್ ಚಾಂಪಿಯನ್ ಶಿಪ್ನಲ್ಲಿ ವಿಹಾನ್ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದರು.
ಶರ್ದುಲ್ ವಿಹಾನ್ ಏಷ್ಯಾಡ್ ನಲ್ಲಿ ಎರಡು ಚಿನ್ನ ಗೆದ್ದಿದ್ದ ಶುಟರ್ ಅನ್ವರ್ ಸುಲ್ತಾನ್ ಅವರ ಬಳಿ ತರಬೇತಿ ಪಡೆದಿದ್ದಾರೆ. ವಿಹಾನ್ ಕಳೆದ ವರ್ಷ ಮಾಸ್ಕೋದಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಆರನೇ ಸ್ಥಾನ ಪಡೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.