ಕ್ರೀಡೆ

ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಕೇರಳಕ್ಕೆ 77 ಕೋಟಿ ದೇಣಿಗೆ ನೀಡಿದ್ದು ನಿಜಾನಾ?

ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಕೇರಳ ನೆರೆ ಸಂತ್ರಸ್ತರಿಗಾಗಿ 77 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ...

ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಕೇರಳಕ್ಕೆ 77 ಕೋಟಿ ದೇಣಿಗೆ ನೀಡಿದ್ದು ನಿಜಾನಾ?
ಕ್ರಿಸ್ಟಿಯಾನೋ ರೊನಾಲ್ಡೊ
Published On :
ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಕೇರಳ ನೆರೆ ಸಂತ್ರಸ್ತರಿಗಾಗಿ 77 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಕೇರಳಕ್ಕೆ ರೊನಾಲ್ಡೊ 77 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ ಎಂಬ ಅಂಶವನ್ನೇ ಮುಂದಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇರಳ ಸರ್ಕಾರಕ್ಕೆ ನೀಡಿರುವ ತುರ್ತು ನಿಧಿಗೆ ಹೋಲಿಸಿ ಟೀಕೆ ಮಾಡಲಾಗುತ್ತಿದೆ. 
ಸಾಮಾಜಿಕ ಜಾಲತಾಣದಲ್ಲಿ ರೊನಾಲ್ಡೊ ಅವರ ಫೋಟೋವನ್ನು ಪೋಸ್ಟ್ ಮಾಡಿ ರೊನಾಲ್ಡೊರನ್ನು ಜನ ಯಾಕೆ ಇಷ್ಟಪಡುತ್ತಾರೆ ಎಂಬುತಕ್ಕೆ ಉತ್ತರ ಇಲ್ಲಿದೆ. ಕೇರಳ ಸಂತ್ರಸ್ತರಿಗೆ ರೊನಾಲ್ಡೊ 77 ಕೋಟಿ ನೀಡಿದ್ದಾರೆ ಎಂದು ಒಕ್ಕಣೆ ಬರೆದಿದ್ದಾರೆ. 
ರೊನಾಲ್ಡೊ ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 77 ಕೋಟಿ ದೇಣಿಗೆ ನೀಡಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ರೊನಾಲ್ಡೊ ಅವರ ಅಧಿಕೃತ ಟ್ವೀಟರ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಪರಿಶೀಲಿಸಿದಾಗ 77 ಕೋಟಿ ರುಪಾಯಿ ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡಿದ ಯಾವುದೇ ಮಾಹಿತಿಯ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇರಲಿಲ್ಲ. 
ಇನ್ನು ಕೇರಳ ಪ್ರವಾಹ ಕುರಿತ ಯಾವುದೇ ಸಂದೇಶಗಳೂ ಅವರ ಖಾತೆಯಲ್ಲಿ ಇಲ್ಲ. ಆದರೆ ಅವರ ನೂರಾರು ಭಾರತೀಯ ಅಭಿಮಾನಿಗಳು ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುಂತೆ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.