ಕ್ರೀಡೆ

ಏಷ್ಯನ್ ಕ್ರೀಡಾಕೂಟ: ಕುಸ್ತಿಯಲ್ಲಿ ಕಂಚು ಗೆದ್ದ ದಿವ್ಯ!

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೂರನೇ ದಿನವೂ ಕುಸ್ತಿ ವಿಭಾಗದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಜರಂಗ್ ಪುನಿಯಾ....

ಏಷ್ಯನ್ ಕ್ರೀಡಾಕೂಟ: ಕುಸ್ತಿಯಲ್ಲಿ ಕಂಚು ಗೆದ್ದ ದಿವ್ಯ!
ಏಷ್ಯನ್ ಕ್ರೀಡಾಕೂಟ: ಕುಸ್ತಿಯಲ್ಲಿ ಕಂಚು ಗೆದ್ದ ದಿವ್ಯ!
Published On :
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೂರನೇ ದಿನವೂ ಕುಸ್ತಿ ವಿಭಾಗದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಜರಂಗ್ ಪುನಿಯಾ, ವಿನೀಶಾ ಪೋಗಟ್ ಬಳಿಕ ಇದೀಗ ಭಾರತದ  ಮಹಿಳಾ ಕುಸ್ತಿಪಟು ದಿವ್ಯ ಕಕ್ರನ್ ಕಂಚಿನ ಪದಕ ಗೆಲ್ಲುವ ಮೂಲಕ ಸಾಧನೆ ಮೆರೆದಿದ್ದಾರೆ.
ಮಹಿಳೆಯರ 68 ಕೆಜಿ ಫ್ರೀಸ್ಟೈಲ್  ವಿಭಾಗದಲ್ಲಿ ದಿವ್ಯ ಸ್ಪರ್ಧಿಸಿದ್ದು ಇಂದಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಚೆನ್ ವೆನ್ಲಿಂಗ್ ಅವರನ್ನು 10-0ರ ಅಂತರದಲ್ಲಿ ಪರಾಭವಗೊಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇದೇ ವೇಳೆ ಭಾರತದ ಇನ್ನಿಬ್ಬರು ಕುಸ್ತಿ ಪಟುಗಳಾದ ಗ್ಯಾನೇಂದರ್ ಹಾಗೂ ಮನೀಶ್ ಕಂಚಿನ ಪದಕ ಗಳಿಸುವ ಅವಕಾಶವನ್ನು ಕೈಚೆಲ್ಲಿದ್ದಾರೆ.
ದಿವ್ಯ ಅವರ ಕಂಚಿನ ಸಾಧನೆಯೊಡನೆ ಭಾರತದ ಒಟ್ಟೂ ಪದಕಗಳ ಸಂಖ್ಯೆ 10ಕ್ಕೆ ತಲುಪಿದ್ದು ಇದರಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.