ವಿಯೆಟ್ನಾಮ್ ಓಪನ್: ಅಜಯ್ ಜಯರಾಮ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ
ವಿಯೆಟ್ನಾಮ್ ಓಪನ್ ಪಂದ್ಯಾವಳಿಯಲ್ಲಿ ಇಂದು ನಡೆದ ಅಂತಿಮ ಹೋರಾಟದಲ್ಲಿ ಇಂಡೋನೇಷಿಯಾ ಆಟಗಾರ ಶೇಸರ್ ಹೈರನ್ ರುಸ್ತವಿಟೊ ವಿರುದ್ಧ ಸೋಲನುಭವಿಸಿದ ಭಾರತದ ಆಟಗಾರ ಅಜಯ್....

Published On :
ಹೋ ಚಿಮಿನ್ ಸಿಟಿ: ವಿಯೆಟ್ನಾಮ್ ಓಪನ್ ಪಂದ್ಯಾವಳಿಯಲ್ಲಿ ಇಂದು ನಡೆದ ಅಂತಿಮ ಹೋರಾಟದಲ್ಲಿ ಇಂಡೋನೇಷಿಯಾ ಆಟಗಾರ ಶೇಸರ್ ಹೈರನ್ ರುಸ್ತವಿಟೊ ವಿರುದ್ಧ ಸೋಲನುಭವಿಸಿದ ಭಾರತದ ಆಟಗಾರ ಅಜಯ್ ಜಯರಾಮ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಎದುರಾಳಿಯ ವಿರುದ್ಧ ಅಜಯ್ 14-21, 10-21 ಸೆಟ್ ಗಳಿಂದ ಪರಾಭವ ಅನುಭವಿಸಿದ್ದಾರೆ.ಈ ಮೂಲಕ ಅವರು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಕೇವಲ 28 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶೇಸರ್, ಜಯರಾಮ್ ವಿರುದ್ಧ ಸುಲಭ ಜಯ ದಾಖಲಿಸಿದ್ದಾರೆ. ಕಳೆದ ತಿಂಗಳು ನಡೆದಿದ್ದ ವೈಟ್ ನೈಟ್ಸ್ ಇಂಟರ್ ನ್ಯಾಷನಲ್ ಚಾಲೆಂಜ್ ನಲ್ಲಿ ಸಹ ಜಯರಾಮ್ ದ್ವಿತೀಯ ಸ್ಥಾನಿಯಾಗಿದ್ದು ಇದೀಗ ಮತ್ತೆ ಎರಡನೇ ಬಾರಿಗೆ ರನ್ನರ್ ಅಪ್ ಎನಿಸಿದ್ದಾರೆ.
ಶನಿವಾರ ನಡೆದಿದ್ದ ಸೆಮಿ ಫೈನಲ್ಸ್ ನಲ್ಲಿ ಜಯರಾಮ್ ಜಪಾನ್‌ನ ಯೂ ಇಗರಾಶಿ ಅವರನ್ನು 21-14 21-19 ಅಂತರದಲ್ಲಿ ಮಣಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


