ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್: ನೋಜೊಮಿ ಒಕುಹರಾ ಮಣಿಸಿದ ಪಿವಿ ಸಿಂಧು ಸೆಮಿ ಫೈನಲ್ಸ್ ಗೆ
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತದ ಪಿ.ವಿ ಸಿಂಧು ಜಪಾನ್ ನ ನೋಜೊಮಿ ಒಕುಹರಾ ಅವರನ್ನು ಮಣಿಸಿದ್ದು ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.

Published On :
ನಾನ್ಜಿಂಗ್: ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತದ ಪಿ.ವಿ ಸಿಂಧು ಜಪಾನ್ ನ ನೋಜೊಮಿ ಒಕುಹರಾ ಅವರನ್ನು ಮಣಿಸಿದ್ದು ಸೆಮಿ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.
ನೋಜೊಮಿ ಒಕುಹರಾ ಅವರ ವಿರುದ್ಧ 2017 ರ ವಿಶ್ವ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯದಲ್ಲಿ ಸಿಂಧು ಸೋಲನ್ನನುಭವಿಸಿದ್ದರು. 2018 ರ ಕ್ವಾರ್ಟರ್ ಫೈನಲ್ ನಲ್ಲಿ 21-17, 21-19 ಸೆಟ್ ಗಳ ಅಂತರದಿಂದ ಸಿಂಧು ನೋಜೊಮಿ ಒಕುಹರಾ ಅವರನ್ನು ಮಣಿಸಿದ್ದು, ಫೈನಲ್ಸ್ ಪ್ರವೇಶಿಸಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಪಿ.ವಿ ಸಿಂಧು ಹಿನ್ನಡೆ ಎದುರಿಸಿದರಾದರೂ ನಂತರದ ಭಾಗದಲ್ಲಿ 11-10 ರ ಮುನ್ನಡೆ ಸಾಧಿಸಿದರು. ಈ ನಂತರ ಮುನ್ನಡೆಯನ್ನು ಬಿಟ್ಟುಕೊಡದ ಸಿಂಧು, 21-17, 21-19 ಸೆಟ್ ಗಳ ಅಂತರದಿಂದ ಎದುರಾಳಿಯನ್ನು ಸೋಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PV Sindhuಪಿವಿ ಸಿಂಧುsemi-finalsಸೆಮಿ ಫೈನಲ್ಸ್Nozomi OkuharaBWF World Championshipಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


