ಕ್ರೀಡೆ

ಕಾಮನ್ ವೆಲ್ತ್ ಗೇಮ್ಸ್ 2018: ವೇಟ್ ಲಿಫ್ಟಿಂಗ್ ನಲ್ಲಿ ವೆಂಕಟ್ ರಾಹುಲ್ ಗೆ ಚಿನ್ನ; ಭಾರತಕ್ಕೆ 4ನೇ ಚಿನ್ನದ ಪದಕ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್ ಲಿಫ್ಟಿಂಗ್ ತಂಡದ...

ಕಾಮನ್ ವೆಲ್ತ್ ಗೇಮ್ಸ್ 2018: ವೇಟ್ ಲಿಫ್ಟಿಂಗ್ ನಲ್ಲಿ ವೆಂಕಟ್ ರಾಹುಲ್ ಗೆ ಚಿನ್ನ; ಭಾರತಕ್ಕೆ 4ನೇ ಚಿನ್ನದ ಪದಕ
ರಾಗಲ ವೆಂಕಟ್ ರಾಹುಲ್
Published On :
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್ ಲಿಫ್ಟಿಂಗ್ ತಂಡದ ಚಿನ್ನದ ಪದಕ ಬೇಟೆ ಮುಂದುವರೆದಿದ್ದು, ಪುರುಷರ 85 ಕೆಜಿ ವಿಭಾಗದಲ್ಲಿ ಭಾರತದ ರಾಗಲ ವೆಂಕಟ್ ರಾಹುಲ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
85 ಕೆಜಿ ತೂಕದ ವಿಭಾಗದಲ್ಲಿ ರಾಗಲ ವೆಂಕಟ್ ರಾಹುಲ್ ಅಗ್ರ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಎರಡು ಹಂತಗಳ ಸ್ಪರ್ಧೆಯಲ್ಲಿ ಕ್ರಮವಾಗಿ 151 ಕೆಜಿ, 187 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು.
ಇನ್ನು ಭಾರತದ ರಾಗಲ ವೆಂಕಟ್ ರಾಹುಲ್ ಗೆ ಡಾನ್ ಒಪೇಲೋಗ್ ತೀವ್ರ ಪೈಪೋಟಿ ನೀಡಿದರು. ಆದರೆ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.
ಕ್ರೀಡಾಕೂಟದಲ್ಲಿ ಭಾರತ ಇವರೆಗೆ 6 ಪದಗಳನ್ನು ಗೆದ್ದಿದೆ. ಅದರಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಸೇರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.