ಕೊರಿಯಾ ಸೂಪರ್ ಸೀರೀಸ್: ಫೈನಲ್ ಪ್ರವೇಶಿಸಿದ ಪಿವಿ ಸಿಂಧು
ಕೊರಿಯಾ ಸೂಪರ್ ಸೀರೀಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿದ್ದಾರೆ.

Published On :
ಸಿಯೋಲ್ : ಕೊರಿಯಾ ಸೂಪರ್ ಸೀರೀಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ಚೀನಾದ ಬಿಂಗ್ ಜಿವೊ ಅವರನ್ನು ಪರಾಭವ ಗೊಳಿಸಿ ಪಿ.ವಿ.ಸಿಂಧು ಫೈನಲ್ಸ್ ಪ್ರವೇಶಿಸಿದರು.
ಸಿಂಧು ಸೆಮಿ ಫೈನಲ್ಸ್ ನಲ್ಲಿ ಚೀನಾ ಆಟಗಾರ್ತಿಯ ವಿರುದ್ಧ 21-10, 17-21, 21-16 ಅಂತರದಿಂದ ಜಯ ಸಾಧಿಸಿದರು.
2014ರ ವಿಶ್ವ ಚ್ಯಾಂಪಿಯನ್ ಕಂಚಿನ ಪದಕ ವಿಜೇತೆ ಜಪಾನ್ ನ ಮಿನಟ್ಸು ಮಿಟಾನಿ ಅವರನ್ನು ಸಿಂಧು 21-19 16-21 21-10 ಸೆಟ್ ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.
ಸರಣಿಯ ಫೈನಲ್ಸ್ ನಲ್ಲಿ ಸಿಂಧು ಜಪಾನ್ ನ ನೊಝೊಮಿ ಓಕುರಾ ಅವರನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PV SindhuNozomi OkuharaHe Bingjiaoಪಿ.ವಿ. ಸಿಂಧುKorea Open Super Seriesಹಿ ಬಿಂಗ್ ಜಿವೊನೊಝೊಮಿ ಓಕುರಾಕೊರಿಯಾ ಓಪನ್ ಸೂಪರ್ ಸೀರೀಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


