ಸನ್ನಿ ಲಿಯೋನ್ ಕೇರಳ ಕೋಬ್ರಾ ಪ್ರಾಂಚೈಸಿ ಸಹ ಮಾಲಕಿ ಮತ್ತು ಬ್ರ್ಯಾಂಡ್ ಅಂಬಾಸಿಡರ್
ಪ್ರೀಮಿಯರ್ ಫುಟ್ಸಾಲ್ ಸೀಸನ್ -2 ಪಂದ್ಯಾವಳಿಗೆ ಸೆಪ್ಟಂಬರ್ 15 ರಂದು ಮುಂಬಯಿಯಲ್ಲಿ ಚಾಲನೆ ದೊರೆಯಲಿದೆ. ವೊರ್ಲಿಯ ಎನ್ ಎಸ್ ಸಿಐ ನಲ್ಲಿ ಸೆಪ್ಟಂಬರ್ ...

Published On :
ನವದೆಹಲಿ: ಪ್ರೀಮಿಯರ್ ಫುಟ್ಸಾಲ್ ಸೀಸನ್ -2 ಪಂದ್ಯಾವಳಿಗೆ ಸೆಪ್ಟಂಬರ್ 15 ರಂದು ಮುಂಬಯಿಯಲ್ಲಿ ಚಾಲನೆ ದೊರೆಯಲಿದೆ. ವೊರ್ಲಿಯ ಎನ್ ಎಸ್ ಸಿಐ ನಲ್ಲಿ ಸೆಪ್ಟಂಬರ್ 17ರ ವರೆಗೆ ಪಂದ್ಯಗಳು ನಡೆಯಲಿವೆ.
ಕೊಚ್ಚಿ ಮೂಲದ ಕೇರಳ ಕೋಬ್ರಾ ತಂಡಕ್ಕೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಬ್ರಾಂಡ್ ಅಂಬಾಸಿಡರ್ ಆಗಿದ್ದು ತಂಡದ ಸಹ ಮಾಲಕಿಯೂ ಆಗಿದ್ದಾರೆ ಎಂದು ಪ್ರೀಮಿಯರ್ ಫುಟ್ಸಾಲ್ ಘೋಷಿಸಿದೆ.
ಬೆಂಗಳೂರಿನ ಕೋರಮಂಗಲದ ಕ್ರೀಡಾಂಗಣದಲ್ಲಿ ಸೆಪ್ಟಂಬರ್ 19 ರಿಂದ 24ರ ವರೆಗೆ ಎರಡನೇ ಸುತ್ತಿನ ಪಂದ್ಯಗಳು ನಡೆಯಲಿವೆ.
ಸೆಪ್ಟಂಬರ್ 26 ರಿಂದ ಅಕ್ಟೋಬರ್ 1 ರ ವರೆಗೆ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳು ದುಬೈನಲ್ಲಿ ನಡೆಯಲಿವೆ ಎಂದು ಪ್ರೀಮಿಯರ್ ಫುಟ್ಸಾಲ್ ತಿಳಿಸಿದೆ.
ಉದ್ಘಾಟನಾ ಸಮಾರಂಭಕ್ಕೆ ಸಾಕರ್ ಲೆಜೆಂಡ್ ಲೂಯಿಸ್ ಫಿಗೊ, ರ್ಯಾನ್ ಗಿಗ್ಸ್, ಪೌಲ್ ಶೋಲ್ಸ್, ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sunny Leoneಸನ್ನಿ ಲಿಯೋನ್brand ambassadorKerala CobrasPremier Futsalರಾಯಾಭಾರಿಕೇರಳ ಕೋಬ್ರಾಪ್ರೀಮಿಯರ್ ಫುಟ್ಸಾಲ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


