ಕ್ರೀಡೆ

ಡೆನ್ಮಾರ್ಕ್ ಓಪನ್: ಸೈನಾ, ಶ್ರೀಕಾಂತ್ ಎರಡನೆ ಸುತ್ತು ಪ್ರವೇಶ, ಸಿಂಧು ಗೆ ಸೋಲಿನ ನಿರಾಶೆ

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಹಾಗೂ ಪುರುಷರ ಸಿಂಗಲ್ಸ್ ಆಟಗಾರರು ಮಿಶ್ರ ಫಲ ಕಂಡಿದ್ದಾರೆ.

ಡೆನ್ಮಾರ್ಕ್ ಓಪನ್: ಸೈನಾ, ಶ್ರೀಕಾಂತ್ ಎರಡನೆ ಸುತ್ತು ಪ್ರವೇಶ, ಸಿಂಧು ಗೆ ಸೋಲಿನ ನಿರಾಶೆ
ಡೆನ್ಮಾರ್ಕ್ ಓಪನ್: ಸೈನಾ, ಶ್ರೀಕಾಂತ್ ಎರಡಣೆ ಸುತ್ತು ಪ್ರವೇಶ, ಸಿಂಧು ಗೆ ಸೋಲಿನ ನಿರಾಶೆ
Published On :
ಒಡೆನ್ಸ್: ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಹಾಗೂ ಪುರುಷರ ಸಿಂಗಲ್ಸ್ ಆಟಗಾರರು ಮಿಶ್ರ ಫಲ ಕಂಡಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭರವಸೆಯ ಆತಗಾರ್ತಿಯಾಗಿದ್ದ ಪಿವಿ ಸಿಂಧು,  ಸೋತು ಹಿಂದಿರುಗಿದರೆ ಇನ್ನೋರ್ವ ಪ್ರಮುಖ ಆಟಗಾರ್ತಿ ಸೈನಾ ನೆಹ್ವಾಲ್ ಗೆಲುವಿನೊಡನೆ ಮುಂದೆ ನಡೆದಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಗೆದ್ದು ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಒಲಿಂಪಿಕ್ ಪದಕ ವಿಜೇತೆ ಸ್ಪೇನ್‌ನ ಕರೊಲಿನಾ ಮರಿನ್ ಅವರನ್ನು ಮಣಿಸಿದ ಸೈನಾ ಮೊದಲ ಸುತ್ತನ್ನು ಯಶಸ್ವಿಯಾಗಿ ಮುಗಿಸಿದರು. 22-20 21-18 ರ ಅಂತರದಲ್ಲಿ ಸೈನಾ ಗೆಲುವು ದಾಖಲಿಸಿದರು. ಚೀನಾದ ಚೆನ್ ಯೂಫಿ ವಿರುದ್ಧ ಸೋಲನುಭವಿಸಿದ ಸಿಂಧು ಪಂದ್ಯಾವಳಿಯಿಂದ ಹೊರನಡೆದರು. 17-21 21-23 ಅಂತರದಲ್ಲಿ ಸಿಂಧು ಚೀನಾ ಆಟಗಾರ್ತಿಯ ವಿರುದ್ಧ ಸೋಲನುಭವಿಸಿದರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್ ಮತ್ತು ಎಚ್‌ಎಸ್ ಪ್ರಣೋಯ್ ಗೆಲುವಿನೊಡನೆ ಮುಂದಿನ ಸುತ್ತಿಗೆ ತೆರಳಿದರೆ ಬಿ ಸಾಯ್ ಪ್ರಣೀತ್ ಸೋಲಿಗೆ ಶರಆಣಾದರು.
ವಿಶ್ವ ನಂ.8 ರ‍್ಯಾಂಕ್‌ನ ಶ್ರೀಂಕಾಂತ್ ಶುಭಾಂಕರ್ ಡೇ ವಿರುದ್ಧ 21-17, 21-15 ಮತ್ತು ವಿಶ್ವ ನಂ.15 ರ‍್ಯಾಂಕ್‌ನ ಪ್ರಣೋಯ್ ಡೆನ್ಮಾರ್ಕ್‌ನ ಎಮಿಲ್ ವಿರುದ್ಧ 21-18 21-19ರ ಅಂತರದ ಗೆಲುವು ದಾಖಲಿಸಿದರು. ಆದರೆ ಹ್ಯಾನ್ಸ್ ಕ್ರಿಸ್ಟಿಯನ್ ಸೊಲ್ಬರ್ಗ್ ವಿಟ್ಟಿಂಗಸ್ ವಿರುದ್ದ 10-21 15-21ರ ಅಂತರದಲ್ಲಿ ಪ್ರಣೀತ್ ಸೋತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.