ಕ್ರೀಡೆ

ಗೋಲ್ ತಡೆಯುವಾಗ ಸಹ ಆಟಗಾರನೊಂದಿಗೆ ಡಿಕ್ಕಿ, ಮೃತಪಟ್ಟ ಗೋಲ್ ಕೀಪರ್!

ಲಾಮೊಂಗನ್ ಫುಟ್ಬಾಲ್ ಕ್ಲಬ್ ಮತ್ತು ಸೆಮೆನ್ ಪಡಂಗ್ ನಡುವಿನ ಪಂದ್ಯದ ವೇಳೆ ಗೋಲ್ ತಡೆಯುವಾಗ ಸಹ ಆಟಗಾರನೊಂದಿಗೆ ಡಿಕ್ಕಿ ಹೊಡೆದ ಇಂಡೋನೇಷ್ಯಾದ ಗೋಲ್ ಕೀಪರ್ ಚೋರುಲ್ ಹುಡಾ ಮೃತಪಟ್ಟಿದ್ದಾರೆ...

ಗೋಲ್ ತಡೆಯುವಾಗ ಸಹ ಆಟಗಾರನೊಂದಿಗೆ ಡಿಕ್ಕಿ, ಮೃತಪಟ್ಟ ಗೋಲ್ ಕೀಪರ್!
ಚೋರುಲ್ ಹುಡಾ
Published On :
ಲಾಮೊಂಗನ್ ಫುಟ್ಬಾಲ್ ಕ್ಲಬ್ ಮತ್ತು ಸೆಮೆನ್ ಪಡಂಗ್ ನಡುವಿನ ಪಂದ್ಯದ ವೇಳೆ ಗೋಲ್ ತಡೆಯುವಾಗ ಸಹ ಆಟಗಾರನೊಂದಿಗೆ ಡಿಕ್ಕಿ ಹೊಡೆದ ಇಂಡೋನೇಷ್ಯಾದ ಗೋಲ್ ಕೀಪರ್ ಚೋರುಲ್ ಹುಡಾ ಮೃತಪಟ್ಟಿದ್ದಾರೆ. 
38 ವರ್ಷದ ಚೋರುಲ್ ಹುಡಾ ಇಂಡೋನೇಷ್ಯಾದ ದಿಗ್ಗಜ ಫುಟ್ಬಾಲ್ ಆಟಗಾರ. ಲಾಮೊಂಗನ್ ಫುಟ್ಬಾಲ್ ಕ್ಲಬ್ ಪರ 500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದರು. ಪಂದ್ಯದ ವೇಳೆ ಎದುರಾಳಿ ಆಟಗಾರ ಗೋಲ್ ಹೊಡೆಯುವುದನ್ನು ಹಿಡಿಯಲು ಹುಡಾ ಮುಂದಾಗಿದ್ದಾರೆ. ಈ ವೇಳೆ ಡಿಫೆಂಡರ್ ರಾಮನ್ ರೊಡ್ರಿಗಸ್ ಸಹ ಚೆಂಡನ್ನು ತಡೆಯಲು ಮುಂದಾಗಿದ್ದು ಇಬ್ಬರು ಮುಖಾಮುಖಿ ಗುದ್ದಿಕೊಂಡಿದ್ದಾರೆ. 
ಚೋರುಲ್ ಹುಡಾ ಅವರ ಎದೆಗೆ ಹಾಗೂ ಮುಖಕ್ಕೆ ರಾಮನ್ ರೊಡ್ರಿಗಸ್ ಅವರ ಮಂಡಿ ಬಲವಾಗಿ ತಗುಲಿದ್ದರಿಂದ ಹುಡಾ ಅವರು ಮೈದಾನದಲ್ಲೇ ಕುಸಿದು ಬಿದ್ದದ್ದರು. ಕೂಡಲೇ ಅಲ್ಲಿಗೆ ಬಂದ ವೈದ್ಯಕೀಯ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯಲ್ಲೇ ಅನುನೀಗಿದರು. ಹುಡಾ ಅವರು ಸಾವಿನ ಸುದ್ದಿ ತಿಳಿದ ಸಾವಿರಾರು ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದರು. ತಮ್ಮ ನೆಚ್ಚಿನ ಪುಟ್ಬಾಲ್ ಆಟಗಾರನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.  
ರಾಮನ್ ರೊಡ್ರಿಗಸ್ ಮತ್ತು ಚೋರುಲ್ ಹುಡಾ ಅವರು ಗುದ್ದಿಕೊಂಡಿರುವ ವಿಡಿಯೋ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.