ಫಿಫಾ ರ್ಯಾಂಕಿಂಗ್: ಎರಡು ಸ್ಥಾನಕ್ಕೆ ಮೇಲಕ್ಕೇರಿದ ಭಾರತ
ಭಾರತೀಯ ಫುಟ್ಬಾಲ್ ತಂಡ ಅಂತರರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ(ಫಿಫಾ) ಸೋಮವಾರ ಬಿಡುಗಡೆ ಮಾಡಿರುವ

Published On :
ನವದೆಹಲಿ: ಭಾರತೀಯ ಫುಟ್ಬಾಲ್ ತಂಡ ಅಂತರರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ(ಫಿಫಾ) ಸೋಮವಾರ ಬಿಡುಗಡೆ ಮಾಡಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ 105 ಸ್ಥಾನಕ್ಕೆ ಏರಿಕೆ ಕಂಡಿದೆ.
ಕಳೆದ ತಿಂಗಳು 107ನೇ ಸ್ಥಾನದಲ್ಲಿ ಬ್ಲ್ಯೂ ಟೈಗರ್ ಗಳು 2019ರ ಎಎಫ್ ಸಿ ಏಷ್ಯನ್ ಕಪ್ ಗೆ ಅರ್ಹತೆ ಪಡೆದ ಒಂದು ವಾರದಲ್ಲೇ 105ನೇ ಸ್ಥಾನ ಪಡೆದಿದ್ದಾರೆ.
ಅಕ್ಟೋಬರ್ 11ರಂದು ಯುಎಇನಲ್ಲಿ ನಡೆದ 2019ರ ಎಎಫ್ ಸಿ ಏಷ್ಯನ್ ಕಪ್ ನಲ್ಲಿ ಭಾರತ, ಮಕಾವೊ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿರುವುದು ರ್ಯಾಂಕಿಂಗ್ ಏರಿಕೆಗೆ ಕಾರಣವಾಗಿದೆ.
2015ರ ಫೆಬ್ರುವರಿಯಲ್ಲಿ ಸ್ಟೀಫನ್ ಕಾನ್ಸ್ಟೆಂಟೈನ್ ಅವರು ತಂಡದ ಕೋಚ್ ಹುದ್ದೆಗೆ ನೇಮಕವಾದಾಗ 171ನೇ ಸ್ಥಾನದಲ್ಲಿದ್ದ ತಂಡ ಬಳಿಕ 173ನೇ ಸ್ಥಾನಕ್ಕೆ ಕುಸಿದಿತ್ತು. ಆ ನಂತರ ಹಂತ ಹಂತವಾಗಿ ಪ್ರದರ್ಶನ ಮಟ್ಟದಲ್ಲಿ ಸುಧಾರಣೆ ಕಂಡು, 2016ರ ಅಂತ್ಯಕ್ಕೆ 135ನೇ ಸ್ಥಾನಕ್ಕೇರಿತ್ತು. ಇದೀಗ ಇನ್ನಷ್ಟು ಉತ್ತಮ ಸಾಧನೆ ಮಾಡಿದೆ.
1996ರಲ್ಲಿ 94ನೇ ಸ್ಥಾನ ಗಳಿಸಿದ್ದು ಇದುವರೆಗಿನ ಅತ್ಯುತ್ತಮ ರ್ಯಾಂಕಿಂಗ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


