ಫಿಫಾ ಅಂಡರ್ 17 ವಿಶ್ವಕಪ್: ಘಾನಾ ವಿರುದ್ಧ ಭಾರತ ಪರಾಭವ, ಟೂರ್ನಿಯಿಂದ ಹೊರಕ್ಕೆ
ಫಿಫಾ ಅಂಡರ್-17 ವಿಶ್ವ ಕಪ್ ನ ಗ್ರೂಪ್ ಎ ಪಂದ್ಯದಲ್ಲಿ ಘಾನಾ ವಿರುದ್ಧ 4-0 ಅಂತರದಿಂದ ಸೋಲನ್ನು ಅನುಭವಿಸುವುದರೊದನೆ ಬಾರತ ಸರಣಿಯಿಂದ ಹೊರ .............

Published On :
ನವದೆಹಲಿ: ಫಿಫಾ ಅಂಡರ್-17 ವಿಶ್ವ ಕಪ್ ನ ಗ್ರೂಪ್ ಎ ಪಂದ್ಯದಲ್ಲಿ ಘಾನಾ ವಿರುದ್ಧ 4-0 ಅಂತರದಿಂದ ಸೋಲನ್ನು ಅನುಭವಿಸುವುದರೊದನೆ ಬಾರತ ಸರಣಿಯಿಂದ ಹೊರ ನಡೆದಿದೆ.ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಪರಾಭವಗೊಂಡಿದೆ.
ಹಿಂದಿನ ಎರಡು ಪಂದ್ಯಗಳಲ್ಲಿ ಸಹ ಸೋತಿದ್ದ ಅಮರ್‌ಜೀತ್ ಕಿಯಾಮ್ ಪಡೆ ಆರಂಭದಿಂದಲೇ ಉತ್ತಮ ಪೈಪೋಟಿ ನೀಡುವ ಪ್ರಯತ್ನ ನಡೆಸಿತು. ಇನ್ನೊಂದೆಡೆ ಘಾನಾ ಮಿಂಚಿನ ಆಟವಾಡಿ ಗೋಲುಗಳಿಸಿಕೊಳ್ಳುವತ್ತ ಎಲ್ಲಾ ರೀತಿಯ ಪ್ರಯತ್ನ ನಡೆಸಿತ್ತು.
ಪಂದ್ಯದ 43ನೇ ನಿಮಿಷದವರೆಗೂ ಎದುರಾಳಿಗಳು ಯಾವ ಗೋಲನ್ನು ದಾಖಲಿಸದಂತೆ ಭಾರತ ಪ್ರಬಲ ಪೈಪೋಟಿ ನೀಡಿತ್ತು. ಆದರೆ 43ನೇ ನಿಮಿಷದಲ್ಲಿ ಎರಿಕ್ ಅಯಿಹಾ ಘಾನಾ ಪರವಾಗಿ ಗೋಲು ದಾಖಲಿಸಿ ಎದುರಾಳಿಯ ಮುನ್ನಡೆಗೆ ಕಾರಣರಾದರು.
ದ್ವಿತೀಯಾರ್ಧದಲ್ಲಿ ಘಾನಾ ಆಟಗಾರರು ಗೋಲು ಗಳಿಸಲಿಕ್ಕಾಗಿ ಹೆಚ್ಚಿನ ಪ್ರಯತ್ನವನ್ನು ಹಾಕಿದ್ದರು. 52ನೇ ನಿಮಿಷದಲ್ಲಿ ಎರಿಕ್ ಅಯಿಹಾ ಮತ್ತೊಂದು ಗೋಲು ದಾಖಲಿಸಿದ್ದರು. ಮುಂದೆ ಅರ್ಧಗಂಟೆಯ ಬಳಿಕ ಗಾನಾ ತಂಡ ಆಟ್ದ ಮೇಲೆ ಹಿಡಿತ ಸಾಧಿಸಿತು.
86ನೇ ನಿಮಿಷದಲ್ಲಿ ರಿಚರ್ಡ್ ಡಾನ್ಸೊ ಚೆಂಡನ್ನು ಗುರಿ ಮುಟ್ಟಿಸಿದರೆ. 87ನೇ ನಿಮಿಷಕ್ಕೆ ಎಮಾನುಯೆಲ್ ಟೋಕು ಇನ್ನೊಂದು ಗೋಲು ದಾಖಲಿಸಿದರು. ಹೀಗೆ ಒಟ್ಟಾರೆ ಪ್ರವಾಸಿ ತಂಡ 4–0 ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
FIFA U-17 World CupIndia FIFA U17India vs Ghana FIFA U17Eric Ayiahಫೀಫಾ ಅಂಡರ್ -17 ವಿಶ್ವಕಪ್ಭಾರತ ಫೀಫಾ ಅಂಡರ್ 17ಭಾರತ - ಘಾನಾ ಫೀಫಾ ಅಂಡರ್ 17 ಪಂದ್ಯಎರಿಕ್ ಅಯಿಹಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


