ಹಾಂಗ್ ಕಾಂಗ್ ಓಪನ್: ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದ ಸಿಂಧು
ರಿಯೋ ಒಲಂಪಿಕ್ಸ್ ನ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಇದೀಗ ನಡೆಯುತ್ತಿರುವ ಹಾಂಗ್ ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ

Published On :
ಕೌಲೂನ್: ರಿಯೋ ಒಲಂಪಿಕ್ಸ್ ನ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಇದೀಗ ನಡೆಯುತ್ತಿರುವ ಹಾಂಗ್ ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸಿಂಧು ಜಪಾನ್‌ನ ಅಯ ಓಹೊರಿ ವಿರುದ್ಧ 21-14, 21-17 ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಸ್ ತಲುಪಿದ್ದಾರೆ. ಎರಡನೇ ಶ್ರೇಯಾಂಕರ ಬಾರತೀಯ ಆಟಗಾರ್ತಿ ಸಿಂಧು ತಮ್ಮ ಮುಂದಿನ ಸುತ್ತಿನಲ್ಲಿ ಚೀನಾ ಓಪನ್ ಚಾಂಪಿಯನ್ ಆಗಿರುವ ಅಕೇನ್ ಯಮಗುಚಿ ಅವರನ್ನು ಎದುರಿಸಲಿದ್ದಾರೆ.
ಇನ್ನು ಇಂದು ನಡೆಯುವ ಇನ್ನೆರಡು ಮಹತ್ವದ ಪಂದ್ಯಗಳಲ್ಲಿ ಭಾರತದ ಇನ್ನೋರ್ವ ಬ್ಯಾಡ್ಮಿಂತನ್ ತಾರೆ ಸೈನಾ ನೆಹ್ವಾಲ್, ಚೀನಾದ ಚೆನ್ ಯೂಫೀ ವಿರುದ್ಧ ಸೆಣಸಲಿದ್ದು ಪುರುಷರ ವಿಭಾಗದಲ್ಲಿ ಎಸ್.ಎಸ್. ಪ್ರಣೋಯ್ ಅವರು ಜಪಾನ್ ನ ಕುಜುಮಾಸ್ ಕಕೈಅವರ ಸವಾಲಿಗೆ ಉತ್ತರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Saina Nehwalಸೈನಾ ನೆಹ್ವಾಲ್PV Sindhuಪಿ.ವಿ. ಸಿಂಧುHS Prannoyಎಚ್ಎಸ್ ಪ್ರಣೋಯ್Akane YamaguchiAya Ohoriಅಯ ಓಹೊರಿಅಕನೆ ಯಮಾಗುಚಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


