ಹಾಂಗ್ ಕಾಂಗ್ ಓಪನ್: ಸೈನಾ, ಸಿಂಧು ಎರಡನೇ ಸುತ್ತು ಪ್ರವೇಶ
ಹಾಂಗ್ ಕಾಂಗ್ ಓಪನ್ ಸೂಪರ್ ಸೀರಿಸ್ ಬ್ಯಾಏಡ್ಮಿಂಟನ್ ನಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

Published On :
ಕೌಲೂನ್: ಹಾಂಗ್ ಕಾಂಗ್ ಓಪನ್ ಸೂಪರ್ ಸೀರಿಸ್ ಬ್ಯಾಏಡ್ಮಿಂಟನ್ ನಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಸೈನಾ ನೆಹ್ವಾಲ್ ಡೆನ್ಮಾರ್ಕಿನ ಮೆಟ್ಟೆ ಪೌಲ್ಸೆನ್ ಅವರನ್ನು 21-19, 23-21 ಸೆಟ್ ಗಳ ಅಂತರದಲ್ಲಿ ಮಣಿಸಿದರೆ, ಸಿಂಧು ಅವರು ಹಾಂಗ್ ಕಾಂಗ್ ನ ಕ್ವಾಲಿಫೈಯರ್ ಲೆಯುಂಗ್ ಯುಯೆಟ್ ಯೇ ಅವರನ್ನು 21-18, 21-10 ಸೆಟ್ ಗಳಿಂದ ಪರಾಭವಗೊಳಿಸಿದರು.
ಇದೇ ವೇಳೆ ಪುರುಷರ ವಿಭಾಗದಲ್ಲಿ ಭಾರತದ ಪರುಪಳ್ಳಿ ಕಶ್ಯಪ್ ಹಾಗೂ ಸೌರಭ್ ವೆರ್ಮಾ ಮೊದಲ ಸುತ್ತಿನಲ್ಲಿಯೇ ಸೋತು ಸರಣಿಯಿಂದ ಹೊರನಡೆದಿದ್ದಾರೆ. ಪರುಪಳ್ಳಿ ಕಶ್ಯಪ್, ಲೀ ಡಾಂಗ್ ಕ್ಯೂನ್ ಅವರ ವಿರುದ್ಧ 21-15, 9-21, 20-22 ಸೆಟ್ ಗಳ ಅಂತರದಲ್ಲಿ ಪರಾಜಿತರಾದರು. ಇನ್ನು ಇಂಡೋನೇಷ್ಯಾದ ಟೊಮಿ ಸುಗಿಯಾರ್ಟೊ ಅವರಿಗೆ ಶರಣಾದ ಸೌರಭ್ ವೆರ್ಮಾ 15-21, 8-21ರ ಅಂತರದಲ್ಲಿ ಸೋಲೊಪ್ಪಿದರು.
ಭಾರತದ ಪರ ಮಹಿಳಾ ಡಬಲ್ಸ್ ನಲ್ಲಿ ಆಡಿದ್ದ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಅವರುಗಳು ಚೀನಾದ ಹುವಾಂಗ್ ಡೋಂಗ್ಬಿಂಗ್ ಮತ್ತು ಲೀ ವೆನ್ಮಿ ಅವರುಗಳ ವಿರುದ್ಧ 11-21, 21-19, 19-21ರ ಅಂತರದಿಂದ ಪರಾಜಿತರಾದರು.
ದ್ವಿತೀಯ ಸುತ್ತಿಗೆ ಪ್ರವೇಶ ಗಿಟ್ಟಿಸಿರುವ ಸೈನಾ ನೆಹ್ವಾಲ್ ಚೆನ್ ಯೂಫಿ ಅವರೊಡನೆ ಮುಂದಿನ ಹೋರಾಟ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Saina Nehwalಸೈನಾ ನೆಹ್ವಾಲ್PV SindhuParupalli Kashyapಪರುಪಳ್ಳಿ ಕಶ್ಯಪ್Tommy Sugiartoಪಿ.ವಿ ಸಿಂಧುMette Poulsenಮೆಟ್ಟೆ ಪೌಲ್ಸೆನ್ಟೊಮಿ ಸುಗಿಯಾರ್ಟೊ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


