ಚೀನಾ ಓಪನ್: ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಸಿಂಧು
ಚೀನಾ ಓಪನ್ ಸೂಪರ್ ಸೀರೀಸ್ ನಲ್ಲಿ ವಿಶ್ವದ ನಂ 2 ಭಾರತದ ಪಿ.ವಿ. ಸಿಂಧು, ಚೀನಾದ ಹಾನ್ ಯುಯಿ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ತಲುಪಿದ್ದಾರೆ.

Published On :
ಫುಜೌ: ಚೀನಾ ಓಪನ್ ಸೂಪರ್ ಸೀರೀಸ್ ನಲ್ಲಿ ವಿಶ್ವದ ನಂ 2 ಭಾರತದ ಪಿ.ವಿ. ಸಿಂಧು, ಚೀನಾದ ಹಾನ್ ಯುಯಿ ಅವರನ್ನು ಮಣಿಸಿ ಎಂಟರ ಘಟ್ಟಕ್ಕೆ ತಲುಪಿದ್ದಾರೆ.
40 ನಿಮಿಷದ ಪಂದ್ಯದಲ್ಲಿ ಸಿಂಧು 21–15, 21–13 ಸೆಟ್ ಗಳಲ್ಲಿ ಎದುರಾಳಿಯನ್ನು ಪರಾಭವಗೊಳಿಸಿ ಸಾಧನೆ ಮಾಡಿದ್ದಾರೆ.
ಸಿಂಧು ಅವರು ಚೀನಾ ಓಪನ್ ಸರಣಿಯಲ್ಲಿ ಭಾರತೀಯರ ಪಾಲಿನ ಏಕೈಕ ಬರವಸೆಯಾಗಿ ಉಳಿದಿದ್ದು ಅವರು ತಮ್ಮ ಮುಂದಿನ ಸುತ್ತಿನಲ್ಲಿ ಚೀನಾದ ಗಾವೊ ಫಾಂಗ್ಜಿ ಅವರನ್ನು ಎದುರಿಸಲಿದ್ದಾರೆ. ಚೀನಾದ ಶಾಂಘೈ ನಲ್ಲಿ ಈ ಪಂದ್ಯ ನಡೆಯಲಿದ್ದು ಭಾರತೀಯ ಕ್ರೀಡಾ ತಾತ್ರೆ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಭಾರತದ ಇನ್ನೋರ್ವ ಮಹಿಳಾ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪುರುಷರ ವಿಭಾಗದ ಭರವಸೆ ಪ್ರಣಯ್ ಇದಾಗಲೇ ಸೋತು ಟುರ್ನಿಯಿಂದ ಹೊರಬಿದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PV SindhuChina Open Super Seriesಪಿ.ವಿ. ಸಿಂಧುHan YueGao Fangjieಹಾನ್ ಯುಯಿಚೀನಾ ಓಪನ್ ಸೂಪರ್ ಸೀರೀಸ್ಗಾವೊ ಫಾಂಗ್ಜಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


