ಏರ್ ಇಂಡಿಗೋ ಸಿಬ್ಬಂದಿ ಅಸಭ್ಯ ವರ್ತನೆ: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬೇಸರ
ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಪ್ರತಿಷ್ಠಿತ ಏರ್ ಇಂಡಿಗೋ ಸಂಸ್ಧೆಯ ವಿರುದ್ಧ ಅಸಮಾಧಾನಗೊಂಡಿದ್ದಾರೆ...

Published On :
ಮುಂಬೈ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಪ್ರತಿಷ್ಠಿತ ಏರ್ ಇಂಡಿಗೋ ಸಂಸ್ಧೆಯ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಏರ್ ಇಂಡಿಗೋ ಸಂಸ್ಥೆಯ ಸಿಬ್ಬಂದಿಯ ಅಸಭ್ಯ ವರ್ತನೆನಿಂದ ಬೇಸರಗೊಂಡಿರುವ ಪಿವಿ ಸಿಂಧು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ನವೆಂಬರ್ 4ರಂದು ಹೈದರಾಬಾದ್ ನಿಂದ ಮುಂಬೈಗೆ 6ಇ 608 ವಿಮಾನದ ಮೂಲಕ ಪ್ರಯಾಣಿಸುವಾಗ ಅತೀ ಕೆಟ್ಟ ಅನುಭವವಾಯಿತು. ಸಂಸ್ಥೆಯ ಗ್ರೌಂಡ್ ಸ್ಟಾಫ್ ಅಜಿತೇಶ್ ಎಂಬಾತ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಟ್ವೀಟ್ ಮಾಡಿದ್ದಾರೆ.
ಈ ವೇಳೆ ಗಗನಸಖಿ ಆಶೀಮಾ ಎಂಬುವರು ಅಜಿತೇಶ್ ಗೆ ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ತಿಳಿ ಹೇಳಲು ಮುಂದಾದಾಗ ಅವರೊಂದಿಗೂ ಆತ ಒರಟಾಗಿ ನಡೆದುಕೊಂಡರು ಎಂದು ಸಿಂಧು ಟ್ವೀಟ್ ಮಾಡಿದ್ದು ಈ ರೀತಿಯ ಸಿಬ್ಬಂದಿ ಕಾರ್ಯನಿರ್ವಹಿಸಿದರೆ ಸಂಸ್ಥೆಯ ಪ್ರತಿಷ್ಠೆ ಕುಂದುತ್ತದೆ ಎಂದು ಇಂಡಿಗೋಗೆ ಛೀಮಾರಿ ಹಾಕಿದ್ದಾರೆ.
Sorry to say ..i had a very bad experience
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


