ಕ್ರೀಡೆ

ಪಾಕ್ ಜೊತೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ: ಸರ್ಕಾರದ ಒಪ್ಪಿಗೆಗೆ ಕಾಯುತ್ತಿರುವ ಬಿಸಿಸಿಐ

ಪಾಕಿಸ್ತಾನ ಜೊತೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ ಆರಂಭಿಸುವ ವಿಷಯದ ಕುರಿತು ಹದಿನೈದು ದಿನಗಳ...

ಪಾಕ್ ಜೊತೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ: ಸರ್ಕಾರದ ಒಪ್ಪಿಗೆಗೆ ಕಾಯುತ್ತಿರುವ ಬಿಸಿಸಿಐ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಪಾಕಿಸ್ತಾನ ಜೊತೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ ಆರಂಭಿಸುವ ವಿಷಯದ ಕುರಿತು ಹದಿನೈದು ದಿನಗಳ ಹಿಂದೆ ಸರ್ಕಾರಕ್ಕೆ ನೆನಪಿಸಲಾಗಿತ್ತು ಎಂದು ಬಿಸಿಸಿಐ ಹೇಳಿದೆ.
ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧದ ವಿಷಯಗಳಲ್ಲಿನ ಭಿನ್ನಾಭಿಪ್ರಾಯಗಳ ಕುರಿತು ಭಾರತೀಯ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ತಿಂಗಳಾಂತ್ಯಕ್ಕೆ ದುಬೈಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದೆ.
ಈ ಹಿಂದಿನ ಅನೇಕ ಮಂಡಳಿಯ  ಅಧಿಕಾರಿಗಳಂತೆ ಬಿಸಿಸಿಐನ ಸಹ ಕಾರ್ಯದರ್ಶಿ ಅಮಿತಾಬ್ ಚೌಧರಿ ಕೂಡ ಸ್ಪಷ್ಟನೆ ನೀಡಿ, ದ್ವಿಪಕ್ಷೀಯ ಸರಣಿ ಪಂದ್ಯಗಳನ್ನು ಪಾಕಿಸ್ತಾನ ಜೊತೆ ಆಡುವ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು ಎಂದು ಹೇಳಿದ್ದಾರೆ.
ಪರಿಸ್ಥಿತಿಯಲ್ಲಿ ಯಾವುದೇ ಹೊಸ ಬದಲಾವಣೆಯಾಗಿಲ್ಲ. ಮೂರು ತಿಂಗಳ ಹಿಂದೆ ಪಾಕಿಸ್ತಾನ ಜೊತೆ ಆಡಲು ಸರ್ಕಾರದ ಅನುಮತಿ ಕೇಳಿದ್ದೆವು. 15 ದಿನಗಳ ಹಿಂದೆ ಕೂಡ ಜ್ಞಾಪಿಸಲಾಗಿತ್ತು. ಸರ್ಕಾರಕ್ಕೆ ಪ್ರತಿಕ್ರಿಯೆ ಸಿಗಬೇಕಿದೆ. ಪಾಕಿಸ್ತಾನ ಜೊತೆ ಆಟವಾಡಬೇಕೆ ಅಥವಾ ಬೇಡವೇ ಎಂಬುದನ್ನು ಸರ್ಕಾರ ನಿರ್ಧರಿಸಲು ಸಾಧ್ಯ ಎಂದರು.
2015ರಿಂದ 2023ರವರೆಗೆ 6 ದ್ವಿಪಕ್ಷೀಯ ಸರಣಿಗಳನ್ನು ಆಡುವುದಾಗಿ ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು 2014ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಭಾರತ ನಡೆದುಕೊಂಡಿಲ್ಲ. ಇದರಿಂದ ತಮಗೆ ನಷ್ಟವಾಗಿದೆ, ಹೀಗಾಗಿ 69.4 ಡಾಲರ್ ಪರಿಹಾರ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ನೊಟೀಸ್ ಕಳುಹಿಸಿತ್ತು.
ಒಪ್ಪಂದದ ಪ್ರಕಾರ ಪಾಕಿಸ್ತಾನ 6ರಲ್ಲಿ ನಾಲ್ಕು ಸರಣಿಗಳನ್ನು ಆಯೋಜಿಸಬೇಕಿದೆ. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಬಿಸಿಸಿಐ ವಿರುದ್ಧ ಐಸಿಸಿ ವಿವಾದ ಬಗೆಹರಿಸುವ ಸಮಿತಿ ಮುಂದೆ ಕೇಸು ದಾಖಲಿಸದಂತೆ  ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮನವೊಲಿಸಲು ನಡೆಯುವ ಸಭೆಯಲ್ಲಿ ಐಸಿಸಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡೇವ್ ರಿಚರ್ಡ್ಸನ್ ಭಾಗವಹಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.