ಆರ್ಚರಿ ವಿಶ್ವಕಪ್: ಪುರುಷರ ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ!
ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ನಲ್ಲಿ ಭಾರತದ ಪುರುಷರ ತಂಡ ಕಾಂಪೌಂಡ್ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.

ಶಾಂಘೈ: ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ನಲ್ಲಿ ಭಾರತದ ಪುರುಷರ ತಂಡ ಕಾಂಪೌಂಡ್ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
ಶನಿವಾರ ಕೊಲಂಬಿಯಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 226-221 ಅಂಕಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿದ್ದು, ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಭಾರತದ ಪುರುಷರ ತಂಡವನ್ನು ಅಭಿಷೇಕ್ ವರ್ಮಾ, ಚಿನ್ನರಾಜು ಶ್ರೀಧರ್, ಅಮನ್‌ಜಿತ್ ಸಿಂಗ್ ಪ್ರತಿನಿಧಿಸಿದ್ದರು.
ಇದಕ್ಕೂ ಮೊದಲು ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಿದ್ದ ಭಾರತ ತಂಡ 232-230 ಅಂಕಗಳ ರೋಚಕ ಜಯ ದಾಖಲಿಸಿತ್ತು. ಅದೇ ಹುಮ್ಮಸ್ಸಿನಲ್ಲಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಭಾರತೀಯ ಕ್ರೀಡಾಪಟುಗಳು ಕೊಲಂಬಿಯಾ ವಿರುದ್ಧ ತೀವ್ರ ಜಿದ್ದಾಜಿದ್ದಿನಿಂದ ಹೋರಾಡಿ 226-221 ಅಂಕಗಳ ಅಂತರದಲ್ಲಿ ಜಯಭೇರಿ ಭಾರಿಸಿದ್ದಾರೆ. ಇನ್ನು ಕೊಲಂಬಿಯಾ ತಂಡದಲ್ಲಿ ಕಾಮಿಲೊ ಆಂಡ್ರೆಸ್ ಕರ್ಡೋನಾ, ಜೋಸ್ ಕಾರ್ಲೊಸ್ ಒಸ್ಪಿನಾ ಮತ್ತು ಡ್ಯಾನಿಯಲ್ ಮುನೋಜ್ ಇದ್ದರು.
ಮಹಿಳೆಯರ ವಿಭಾಗದ ಪಂದ್ಯದಲ್ಲಿ ಕೊರಿಯಾ, ಡೆನ್ಮಾರ್ಕ್ ಮತ್ತು ರಷ್ಯಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


