ಕ್ರೀಡೆ

ಫಿಫಾ ರ್ಯಾಂಕಿಂಗ್: 21 ವರ್ಷಗಳ ನಂತರ ಭಾರತಕ್ಕೆ 100ನೇ ಸ್ಥಾನ

ಅಂತಾರಾಷ್ಟ್ರೀಯ ಫುಟ್ಬಾಲ್‌ ಫೆಡರೇಷನ್‌ (ಫಿಫಾ) ಗುರುವಾರ ಪ್ರಕಟಿಸಿರುವ ನೂತನ ರಾಕಿಂಗ್‌ ಪಟ್ಟಿಯಲ್ಲಿ ಭಾರತ ಕಳೆದ....

ಫಿಫಾ ರ್ಯಾಂಕಿಂಗ್: 21 ವರ್ಷಗಳ ನಂತರ ಭಾರತಕ್ಕೆ 100ನೇ ಸ್ಥಾನ
ಕೋಚ್ ಸ್ಟೀಫನ್ ಕಾನ್ ಸ್ಟೆಂಟೈನ್ ಅವರೊಂದಿಗೆ ಆಟಗಾರರಾದ ಸುನಿಲ್ ಛಟ್ರಿ, ಗುರುಪ್ರೀತ್ ಸಿಂಗ್
Published On :
ನವದೆಹಲಿ: ಅಂತಾರಾಷ್ಟ್ರೀಯ ಫುಟ್ಬಾಲ್‌ ಫೆಡರೇಷನ್‌ (ಫಿಫಾ) ಗುರುವಾರ ಪ್ರಕಟಿಸಿರುವ ನೂತನ ರಾಕಿಂಗ್‌ ಪಟ್ಟಿಯಲ್ಲಿ ಭಾರತ ಕಳೆದ 21 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 100ನೇ ಸ್ಥಾನ ತಲುಪಿದೆ.
ಎರಡು ದಶಕಗಳ ನಂತರ ಭಾರತ ಇದೇ ಮೊದಲ ಬಾರಿ ಉತ್ತಮ ಸ್ಥಾನ ತಲುಪಿದ್ದು, 21 ವರ್ಷಗಳಲ್ಲಿ ಮೊದಲ ಬಾರಿ ಹಾಗೂ ಸ್ವಾಂತಂತ್ರ್ಯ ನಂತರ ಆರನೇ ಬಾರಿ ಫಿಫಾ ರ್ಯಾಂಕಿಂಗ್ ನ ಟಾಪ್ 100ರಲ್ಲಿ ಸ್ಥಾನ ಪಡೆದಿದೆ.
1996ರಲ್ಲಿ ಭಾರತ 94ನೇ ಸ್ಥಾನ ತಲುಪಿತ್ತು. ಆ ನಂತರ 1993ರಲ್ಲಿ 99ನೇ ಸ್ಥಾನ ಹಾಗೂ 1996ರಲ್ಲಿ 100ನೇ ಸ್ಥಾನ ತಲುಪಿತ್ತು. 
ಭಾರತ ಫಿಫಾ ರ್ಯಾಂಕಿಂಗ್ ನಲ್ಲಿ 100ನೇ ಸ್ಥಾನ ಪಡೆದಿರುವು ಖುಷಿ ತಂದಿದೆ. ಇದು ನಾವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ ಎಂದು ರಾಷ್ಟ್ರೀಯ ಕೋಚ್ ಸ್ಟೀಫನ್ ಕಾನ್ ಸ್ಟೆಂಟೈನ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.