ಕ್ರೀಡೆ

ಚೀನಾಗೆ ಭಾರತದ ಸಾಮರ್ಥ್ಯದ ಪರಿಚಯ ಮಾಡಿಸುತ್ತೇನೆ: ಬಾಕ್ಸರ್ ವಿಜೇಂದರ್ ಸಿಂಗ್

ಚೀನಾಗೆ ಭಾರತದ ಸಾಮರ್ಥ್ಯದ ಪರಿಚಯ ಮಾಡಿಸುತ್ತೇನೆ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.

ಚೀನಾಗೆ ಭಾರತದ ಸಾಮರ್ಥ್ಯದ ಪರಿಚಯ ಮಾಡಿಸುತ್ತೇನೆ: ಬಾಕ್ಸರ್ ವಿಜೇಂದರ್ ಸಿಂಗ್
ವಿಜೇಂದರ್ ಸಿಂಗ್ ಹಾಗೂ ಜುಲ್ಫಿಕರ್ (ಸಂಗ್ರಹ ಚಿತ್ರ)
Published On :

ಮುಂಬೈ: ಚೀನಾಗೆ ಭಾರತದ ಸಾಮರ್ಥ್ಯದ ಪರಿಚಯ ಮಾಡಿಸುತ್ತೇನೆ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.

ಮುಂಬರುವ ಆಗಸ್ಟ್ 5 ರಂದು ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಚೀನಾದ ಬಾಕ್ಸರ್ ಜುಲ್ಫಿಕರ್  ಮೈಮಯ್ತ್ ಅಲಿ ಅವರ ವಿರುದ್ಧ ಸೆಣಸಲಿದ್ದು, ತೀವ್ರ ಕುತೂಹಲ ಕೆರಳಿಸಿರುವ ಈ ಪೈಪೋಟಿಗೆ ಉಭಯ ದೇಶಗಳು  ಕ್ರೀಡಾ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ವಿಜೇಂದರ್ ಹಾಗೂ ಜುಲ್ಫಿಕರ್ ತಲಾ ಒಂದೊಂದು ಬೆಲ್ಟ್ ಗೆದ್ದಿದ್ದು, ಆಗಸ್ಟ್ 5ರಂದು ನಡೆಯುವ ಪಂದ್ಯ ಡಬಲ್ ಟೈಟಲ್ ಫೈಟ್ ಆಗಿರಲಿದೆ. ಅಂದು ಸೋಲುವ ಬಾಕ್ಸರ್  ತಮ್ಮ ಟೈಟಲ್ ಬೆಲ್ಟ್ ಅನ್ನು ಗೆದ್ದ ಬಾಕ್ಸರ್ ಗೆ ನೀಡಬೇಕಿರುತ್ತದೆ.

ಈ ಭಾರಿ ನಿರೀಕ್ಷಿತ ಪಂದ್ಯ ಭಾರತದ ಮುಂಬೈನಲ್ಲಿ ನಡೆಯುತ್ತಿದ್ದು, ಮುಂಬೈನ ವೊರ್ಲಿಯಲ್ಲಿರುವ ಎನ್​ಎಸ್​ಸಿಐ ಸ್ಟೇಡಿಯಂನಲ್ಲಿ ನಡೆಯಲಿದೆ.

31 ವರ್ಷದ ವಿಜೇಂದರ್ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಮಿಡ್ಲ್​ವೇಟ್ ಚಾಂಪಿಯನ್ ಆಗಿದ್ದರೆ, 23 ವರ್ಷದ ಎಡಗೈ ಬಾಕ್ಸರ್ ಜುಲ್ಪಿಕರ್ ಡಬ್ಲ್ಯುಬಿಒ ಓರಿಯಂಟರ್ ಸೂಪರ್ ಮಿಡ್ಲ್​ವೇಟ್ ಚಾಂಪಿಯನ್ ಆಗಿದ್ದಾರೆ. ಈ ಪಂದ್ಯಕ್ಕಾಗಿ  ಟ್ರೇನರ್ ಲೀ ಬಿಯರ್ಡ್ ಜತೆಗೂಡಿ ಮ್ಯಾಂಚೆಸ್ಟರ್​ನಲ್ಲಿ ತರಬೇತಿ ಪಡೆಯುತ್ತಿರುವ ವಿಜೇಂದರ್, "ಚೀನಾ ಮತ್ತು ಭಾರತ ದೊಡ್ಡ ದೊಡ್ಡ ಯುದ್ಧಗಳನ್ನು ಮಾಡಿವೆ. ಇದೀಗ ರಿಂಗ್ ಒಳಗಡೆ ಚೀನಾ ಮತ್ತು ಭಾರತ ಸೆಣಸಾಡಲಿದೆ.  ಭಾರತ ಕ್ರೀಡೆ, ಆರ್ಥಿಕತೆ ಎಲ್ಲದರಲ್ಲೂ ಉತ್ತಮವಾಗಿದೆ. ಆಗಸ್ಟ್ 5ರಂದು ರಿಂಗ್ ನಲ್ಲಿ ಭಾರತದ ಸಾಮರ್ಥ್ಯವನ್ನು ಚೀನಾ ಬಾಕ್ಸರ್ ಗೆ ಪರಿಚಯ ಮಾಡಿಕೊಡುತ್ತೇನೆ ಎಂದು ವಿಜೇಂದರ್ ಹೇಳಿದ್ದಾರೆ.

"ಆಗಸ್ಟ್ 5ರ ಪಂದ್ಯಕ್ಕೆ ಈಗಾಗಲೇ ಸಂಪೂರ್ಣ ಸಜ್ಜಾಗಿದ್ದೇನೆ. ಜುಲ್ಪಿಕರ್ ಇನ್ನೂ ಚಿಕ್ಕ ಹುಡುಗ. ಅಲ್ಲದೆ ಎಡಚ. ನನ್ನನ್ನು ನಾಕೌಟ್ ಮಾಡುತ್ತೇನೆ ಎಂದು ಅವನು ಹೇಳಿದಾಗ ನಾನು ನಕ್ಕಿದ್ದೆ. ನಾವೇ ಬೆಸ್ಟ್ ಎಂದು ಚೀನಾಕ್ಕೆ  ತೋರಿಸಿಕೊಡಲಿದ್ದೇವೆ. ತರಬೇತಿ ಅದ್ಭುತವಾಗಿ ಸಾಗುತ್ತಿದ್ದು. ನಾಳೆ ಮ್ಯಾಂಚೆಸ್ಟರ್​ಗೆ ತೆರಳಿ ಮತ್ತೆ ಅಭ್ಯಾಸ ನಡೆಸಲಿದ್ದೇನೆ. ಪಂದ್ಯಕ್ಕೂ ಒಂದು ವಾರ ಮುನ್ನ ಮುಂಬೈಗೆ ಬರಲಿದ್ದೇನೆ" ಎಂದು ವಿಜೇಂದರ್ ಹೇಳಿದ್ದಾರೆ.

2015ರಲ್ಲಿ ವೃತ್ತಿಪರ ಬಾಕ್ಸಿಂಗ್​ ಗೆ ಇಳಿದ ವಿಜೇಂದರ್ ಹಾಗೂ ಜುಲ್ಪಿಕರ್ ಈವರೆಗೂ ತಲಾ 8 ಪಂದ್ಯಗಳನ್ನಾಡಿದ್ದಾರೆ. ಜುಲ್ಪಿಕರ್ 5 ನಾಕೌಟ್ ಗೆಲುವು ಕಂಡಿದ್ದಾರೆ. ವಿಜೇಂದರ್ 7 ನಾಕೌಟ್ ಗೆಲುವು ಸಾಧಿಸಿದ್ದಾರೆ.

ಸಚಿನ್ ಗೆ ಮೊದಲ ಟಿಕೆಟ್!
ಆಗಸ್ಟ್ 5ರ ಪಂದ್ಯಕ್ಕೆ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ವಿಜೇಂದರ್, ಪಂದ್ಯದ ಮೊದಲ ಟಿಕೆಟ್ ಅನ್ನು ಭಾರತದ ಮಾಜಿ ಕ್ರಿಕೆಟಿಗೆ ಮಾಸ್ಚರ್ ಬ್ಲಾಸ್ಟರ್ ಗೆ ನೀಡಿದರು. ಖುದ್ಧು ಸಚಿನ್ ತೆಂಡೂಲ್ಕರ್ ಅವರ ಮುಂಬೈ  ನಿವಾಸಕ್ಕೆ ತೆರಳಿದ್ದ ವಿಜೇಂದರ್ ಸಿಂಗ್ ಅವರು, ಮೊದಲ ಟಿಕೆಟ್ ನೀಡಿ ಪಂದ್ಯ ವೀಕ್ಷಣೆಗೆ ಆಹ್ವಾನಿಸಿದರು. ಇನ್ನು ವಿಜೇಂದರ್ ಪಂದ್ಯವಾಡುವ ಅದೇ ದಿನ ಭಾರತದ ಇತರೆ ಮೂವರು ಬಾಕ್ಸರ್​ ಗಳಾದ ಅಖಿಲ್ ಕುಮಾರ್,  ಜಿತೇಂದರ್ ಕುಮಾರ್ ಹಾಗೂ ನೀರಜ್ ಗಯಾತ್ ರಿಂಗ್​ಗೆ ಇಳಿಯಲಿದ್ದು ಅಂತಾರಾಷ್ಟ್ರೀಯ ಬಾಕ್ಸರ್​ ಗಳ ವಿರುದ್ಧ ಆಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.