ಬೋಪಣ್ಣ–ದಬ್ರೋವ್‌ಸ್ಕಿ ಜೋಡಿ ಮುಡಿಗೆ ಫ್ರೆಂಚ್ ಓಪನ್ ಕಿರೀಟ
ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ....

Published On :
ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ದಬ್ರೋವ್‌ಸ್ಕಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲಿಯಾಂಡರ್ ಫೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಟೆನಿಸ್ ಪಟು ಎಂಬ ಗೌರವಕ್ಕೆ ಬೋಪಣ್ಣ ಪಾತ್ರರಾಗಿದ್ದಾರೆ.
ಪ್ಯಾರಿಸ್ ನಲ್ಲಿ ನಡೆದ ರೋಚಕ ಅಂತಿಮ ಹಣಾಹಣಿಯಲ್ಲಿ ರೋಹನ್ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ಜೋಡಿ ಕೊಲಂಬಿಯಾದ ರಾಬರ್ಟ್ ಫರಾಹ್ ಮತ್ತು ಜರ್ಮನಿಯ ಅನ್ನಾ ಲೆನಾ ಗ್ರೋನೆಫೆಲ್ಡ್ ವಿರುದ್ಧ 2-6, 6-2, 12-10 ನೇರ ಸೆಟ್ ನಲ್ಲಿ ಜಯ ಸಾಧಿಸಿದ್ದಾರೆ.
ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬೋಪಣ್ಣ ಜೋಡಿ 7-5, 6-3 ರಿಂದ ನೆರ ಸೆಟ್‌ನಲ್ಲಿಯೇ ಜೆಕ್ ನ ಆ್ಯಂಡ್ರಿಯಾ ಹ್ಲಾವಕೊವಾ, ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವಾಸಿಲಿನ್ ವಿರುದ್ಧ ಜಯ ಸಾಧಿಸುವ ಮೂಲಕ ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ಡಾಬ್ರೊಸ್ಕಿ ಜೋಡಿ ಫೈನಲ್ ಪ್ರವೇಶಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಗೆಲುವುFrench Openಫ್ರೆಂಚ್ ಓಪನ್Rohan Bopanna-Gabriela Dabrowskiclinchರೋಹನ್ ಬೋಪಣ್ಣ - ಗೇಬ್ರಿಯೆಲಾ ದಬ್ರೋವ್‌ಸ್ಕಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


