ಪ್ರೊ ಕಬಡ್ಡಿ 2017: ಟೈಟಾನ್ಸ್ ಗೆ ತಿವಿದ ಬೆಂಗಳೂರು ಬುಲ್ಸ್, ಶುಭಾರಂಭ
ದೇಶದಲ್ಲಿ ಮತ್ತೊಮ್ಮೆ ಕಬಡ್ಡಿ ಫೀವರ್ ಶುರುವಾಗಿದೆ. ಪ್ರೊ ಕಬಡ್ಡಿ 5ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತೆಲುಗು ಟೈಟಾನ್ಸ್ ವಿರುದ್ಧ ಗೆದ್ದು...

Published On :
ಹೈದರಾಬಾದ್: ದೇಶದಲ್ಲಿ ಮತ್ತೊಮ್ಮೆ ಕಬಡ್ಡಿ ಫೀವರ್ ಶುರುವಾಗಿದೆ. ಪ್ರೊ ಕಬಡ್ಡಿ 5ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತೆಲುಗು ಟೈಟಾನ್ಸ್ ವಿರುದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 31-21 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿದೆ. ಇನ್ನು ಪಂದ್ಯಾವಳಿಯಲ್ಲಿ ತೆಲುಗು ಟೈಟಾನ್ಸ್ ಗೆ ಇದು ಎರಡನೇ ಪಂದ್ಯವಾಗಿದ್ದು ಎರಡರಲ್ಲೂ ಟೈಟಾನ್ಸ್ ಸೋಲು ಕಂಡಿದೆ.
ತೆಲುಗು ಟೈಟಾನ್ಸ್ ತಂಡ ಪಾಟ್ನಾ ಪೈರೆಟ್ಸ್ ವಿರುದ್ಧ ಮೊದಲ ಪಂದ್ಯವನ್ನು ಆಡಿತ್ತು. ಆದರೆ ಆ ಪಂದ್ಯದಲ್ಲೂ ಟೈಟಾನ್ಸ್ ಸೋಲು ಕಂಡಿದೆ.
ತೆಲುಗು ಟೈಟಾನ್ಸ್ ನ ರಾಹುಲ್ ಚೌಧರಿ ರೈಡಿಂಗ್ ನಲ್ಲಿ 500 ಅಂಕ ಗಡಿ ದಾಟಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


