ಆಸ್ಟ್ರೇಲಿಯಾ ಓಪನ್ ಮಿಕ್ಸೆಡ್ ಡಬಲ್ಸ್; ಪೇಸ್-ಹಿಂಗಿಸ್ ಜೋಡಿ ಹೊರಕ್ಕೆ
ಭಾರತೀಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಸ್ವಿಸ್ ಜೋಡಿ ಮಾರ್ಟಿನಾ ಹಿಂಗಿಸ್ ಆಸ್ಟ್ರೇಲಿಯಾ ಓಪನ್ ಮಿಕ್ಸೆಡ್ ಡಬಲ್ಸ್ ಕ್ವಾರ್ಟರ್ ಫೈನಲ್ಸ್ ಪಂದ್ಯದಿಂದ ಗುರುವಾರ ಹೊರಬಿದ್ದಿದ್ದಾರೆ.

Published On :
ಮೆಲ್ಬರ್ನ್: ಭಾರತೀಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಸ್ವಿಸ್ ಜೋಡಿ ಮಾರ್ಟಿನಾ ಹಿಂಗಿಸ್ ಆಸ್ಟ್ರೇಲಿಯಾ ಓಪನ್ ಮಿಕ್ಸೆಡ್ ಡಬಲ್ಸ್ ಕ್ವಾರ್ಟರ್ ಫೈನಲ್ಸ್ ಪಂದ್ಯದಿಂದ ಗುರುವಾರ ಹೊರಬಿದ್ದಿದ್ದಾರೆ.
ಪೇಸ್-ಹಿಂಗಿಸ್ ಜೋಡಿ ಸ್ಯಾಮ್ ಗ್ರಾಥ್ ಮತ್ತು ಸಮಂತಾ ಸ್ಟಾಸರ್ ಜೋಡಿಗೆ ೩-೬, ೨-೬ ರಿಂದ ಸೋಲನ್ನೊಪ್ಪಿದ್ದಾರೆ. ಗೆದ್ದ ಆಸ್ಟ್ರೇಲಿಯನ್ ಜೋಡಿ ಪ್ರಾರಂಭದಿಂದಲೂ ಆಕ್ರಮಣಕಾರಿ ಆಟವನ್ನಾಡಿ ೧೨ ಎಸ್ ಗಳನ್ನು ಹೊಡೆದಿದ್ದಾರೆ. ಪೇಸ್-ಹಿಂಗಿಸ್ ಜೋಡಿಗೆ ಕೇವಲ ೩ ಏಸ್ ಗಳನ್ನು ಹೊಡೆಯಲು ಸಾಧ್ಯವಾಗಿದೆ.
ಪೇಸ್-ಹಿಂಗಿಸ್ ಜೋಡಿ ಪ್ರಿ-ಕ್ವಾರ್ಟರ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕೆಸಿ ಡೆಲ್ಲಾಕ್ವ ಮತ್ತು ಮ್ಯಾಟ್ ರೀಡ್ ಜೋಡಿಯನ್ನು ೬-೨,೬-೩ ರಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Australian Openmixed doublesLeander PaesMartina Hingisಲಿಯಾಂಡರ್ ಪೇಸ್ಮಾರ್ಟಿನಾ ಹಿಂಗಿಸ್ಆಸ್ಟ್ರೇಲಿಯಾ ಓಪನ್ಮಿಕ್ಸೆಡ್ ಡಬಲ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


