ಸತ್ನಾಮ್ ಸಿಂಗ್ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಸೈ: ಅಭಿಶೇಕ್
ದಲಾಸ್ ಮಾವೆರಿಕ್ಸ್ ತಂಡದಲ್ಲಿ ಆಡುತ್ತಿರುವ ಮೊದಲ ಭಾರತೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಸತ್ನಾಮ್ ಸಿಂಗ್ ಅವರ ಜೀವನಚರಿತ್ರೆಯನ್ನೂ...

Published On :
ನವದೆಹಲಿ: ದಲಾಸ್ ಮಾವೆರಿಕ್ಸ್ ತಂಡದಲ್ಲಿ ಆಡುತ್ತಿರುವ ಮೊದಲ ಭಾರತೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಸತ್ನಾಮ್ ಸಿಂಗ್ ಅವರ ಜೀವನಚರಿತ್ರೆಯನ್ನೂ ಸಿನಿಮಾವಾಗಿ ತೆರೆಗೆ ತರುವುದಿದ್ದರೆ ನಾಯಕನಟವಾಗಿ ಅಭಿನಯಿಸುವುದಾಗಿ ಬಾಲಿವುಡ್ ನಟ ಅಭಿಶೇಕ್ ಬಚ್ಚನ್ ಹೇಳಿದ್ದಾರೆ.
ಆದರೆ ಅಮೆರಿಕದ ಎನ್‌ಬಿಎ(ರಾಷ್ಟ್ರೀಯ ಬಾಸ್ಕೆಟ್ ಬಾಲ್)ನಲ್ಲಿ ನೀವು ಪ್ರಶಸ್ತಿ ಗೆದ್ದರೆ ಸಂಭಾವನೆ ತೆಗೆದುಕೊಳ್ಳದೆ ಉಚಿತವಾಗಿ ನಿಮ್ಮ ಜೀವನಚರಿತ್ರೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಟ್ವೀಟರ್ ಮೂಲಕ ಸತ್ನಾಮ್ ಗೆ ಅಭಿಶೇಕ್ ಪ್ರತಿಕ್ರಿಯೆ ನೀಡಿದ್ದಾರೆ.
ಜತೆಗೆ ನನಗೆ ನೀಡುವ ಹಣವನ್ನು ನೀವು ಸಮಾಜಸೇವೆಗೆ ನೀಡಬಹುದು, ಅದು ನಿಮಗೆ ಬಿಟ್ಟಿದ್ದು ಎಂದು ಅಭಿಶೇಕ್ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ತನ್ನ ಜೀವನಚರಿತ್ರೆಯನ್ನೂ ಸಿನಿಮಾವಾಗಿ ತೆರೆಗೆ ತರುವುದಿದ್ದರೆ ನಟ ಅಭಿಶೇಕ್ ಬಚ್ಚನ್ ನಟಿಸಬೇಕೆಂಬ ಇಂಗಿತವನ್ನು ಸತ್ನಾಮ್ ಸಿಂಗ್ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


