19ನೇ ವರ್ಷಕ್ಕೆ ವಿದಾಯ ಹೇಳಿದ ವಿಶ್ವ ಚಾಂಪಿಯನ್ ಯಾನಾ
ಜಿಮ್ನಾಸ್ಟಿಕ್ ವಿಶ್ವ ಚಾಂಪಿಯನ್ ರಷ್ಯಾದ ಯಾನಾ ಕುದ್ರ್ಯಾತ್ಸವಾ 19ನೇ ವರ್ಷಕ್ಕೆ ಕ್ರೀಡೆಗೆ ದಿಢೀರ್ ವಿದಾಯ ಘೋಷಿಸಿದ್ದಾರೆ...

ಮಾಸ್ಕೋ: ಜಿಮ್ನಾಸ್ಟಿಕ್ ವಿಶ್ವ ಚಾಂಪಿಯನ್ ರಷ್ಯಾದ ಯಾನಾ ಕುದ್ರ್ಯಾತ್ಸವಾ 19ನೇ ವರ್ಷಕ್ಕೆ ಕ್ರೀಡೆಗೆ ದಿಢೀರ್ ವಿದಾಯ ಘೋಷಿಸಿದ್ದಾರೆ.
ದ ಏಂಜೆಲ್ ವಿದ್ ಐರನ್ ವಿಂಗ್ಸ್ ಎಂದೇ ಖ್ಯಾತರಾಗಿದ್ದ ಯಾನಾ 2013 ರಿಂದ 2015ರ ಅವಧಿಯಲ್ಲಿ ಲಯಬದ್ಧ ಜಿನ್ಮಾಸ್ಟಿಕ್ಸ್ ನಲ್ಲಿ 13 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ.
ಕಳೆದ ರಿಯೋ ಒಲಿಂಪಿಕ್ಸ್ ನ ಆಲ್ ಆರೌಂಡರ್ ಫೈನಲ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹಲವು ಗಂಭೀರ ಗಾಯಗಳ ಸಮಸ್ಯೆಯಿಂದ ಬಳಲುತ್ತಿದ್ದ ಯಾನಾ ನಿರ್ಧಾರವನ್ನು ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಷನ್ ಕೂಡ ಖಚಿಪಡಿಸಿದೆ. ಲಯಬದ್ಧ ಜಿಮ್ನಾಸ್ಟಿಕ್ಸ್ ನ ಇತಿಹಾಸದಲ್ಲಿ ಅತ್ಯಂತ ವರ್ಣರಂಜಿತ ಕ್ರೀಡಾಜೀವನ ಅಂತ್ಯಗೊಂಡಿದೆ.
4ನೇ ವರ್ಷದಿಂದ ಜಿಮ್ನಾಸ್ಟಿಕ್ ಅಭ್ಯಾಸ ಆರಂಭಿಸಿದ್ದ ಯಾನಾ 2013ರಲ್ಲಿ ತಮ್ಮ 15ನೇ ವರ್ಷದಲ್ಲಿ ಲಯಬದ್ಧ ಜಿಮ್ನಾಸ್ಟಿಕ್ಸ್ ಆಲ್ ಆರೌಂಡರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


