ಸುರೇಶ್ ಕಲ್ಮಾಡಿ, ಅಭಯ್ ಚೌಟಾಲಾ ನೇಮಕ ಅನೂರ್ಜಿತಗೊಳಿಸಿದ ಐಒಎ!
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಛೆಗೆ ನೇಮಕವಾಗಿದ್ದ ಕಾಮನ್ ವೆಲ್ತ್ ಹಗರಣದ ಕುಖ್ಯಾತಿಯ ಸುರೇಶ್ ಕಲ್ಮಾಡಿ ಮತ್ತು ಅಭಯ್ ಚೌಟಾಲಾ ಅವರ ನೇಮಕವನ್ನು ಐಎಒ ಅನೂರ್ಜಿತಗೊಳಿಸಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಛೆಗೆ ನೇಮಕವಾಗಿದ್ದ ಕಾಮನ್ ವೆಲ್ತ್ ಹಗರಣದ ಕುಖ್ಯಾತಿಯ ಸುರೇಶ್ ಕಲ್ಮಾಡಿ ಮತ್ತು ಅಭಯ್ ಚೌಟಾಲಾ ಅವರ ನೇಮಕವನ್ನು ಐಎಒ ಅನೂರ್ಜಿತಗೊಳಿಸಿದೆ.
ಸುರೇಶ್ ಕಲ್ಮಾಡಿ, ಅಭಯ್ ಚೌಟಾಲಾ ಅವರನ್ನು ಈ ಹಿಂದೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಸಂಸ್ಥೆಯ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಕ್ರೀಡಾವಲಯದಿಂದಲೂ ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು. ಕಲ್ಮಾಡಿ ಮತ್ತು ಅಭಯ್ ಚೌಟಾಲಾ ನೇಮಕದ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಲಾಗಿತ್ತು. ಸ್ವತಃ ಕೇಂದ್ರ ಕ್ರೀಡಾ ಸಚಿವಾಲಯವೇ ಕಲ್ಮಾಡಿ ನೇಮಕವನ್ನು ನಿರೋಧಿಸಿತ್ತು. ಹೀಗಾಗಿ ಇದೀಗ ಎಚ್ಚೆತ್ತುಕೊಂಡಿರುವ ಐಒಎ ಇವರಿಬ್ಬರ ನೇಮಕವನ್ನು ಅನೂರ್ಜಿತಗೊಳಿಸಿದೆ.
ಅಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಒಎ ಕಲ್ಮಾಡಿ ಮತ್ತು ಅಭಯ್ ಚೌಟಾಲಾ ಅವರನ್ನು ಈ ಹಿಂದೆ ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಇದೊಂದು ತಾಂತ್ರಿಕ ದೋಷಪೂರಿತ ನಿರ್ಧಾರವೆಂದು ತಿಳಿದಿದ್ದು, ಇದೀಗ ಈ ನಿರ್ಧಾರವನ್ನು ಅನೂರ್ಜಿತಗೊಳಿಸಲಾಗಿದೆ. ಸಂಸ್ಥೆಗೂ ಸುರೇಶ್ ಕಲ್ಮಾಡಿ ಅವರಿಗೂ ಯಾವುದೇ ರೀತಿಯ ಅಧಿಕೃತ ಸಂಪರ್ಕವಿಲ್ಲ ಎಂದು ಐಒಎ ಸ್ಪಷ್ಟಪಡಿಸಿದೆ.
ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುರೇಶ್ ಕಲ್ಮಾಡಿ ಅವರನ್ನು ಈ ಹಿಂದೆ ಕಳೆದ ಡಿಸೆಂಬರ್ 27ರಂದು ಚೆನ್ನೈನನಲ್ಲಿ ನಡೆದ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಗೌರವ ಆಜೀವ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


