ಕ್ರಿಸ್ಟಿಯಾನೋ ರೊನಾಲ್ಡೊ ಫೀಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ
ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ 2016ನೇ ಸಾಲಿನ ಫಿಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಜ್ಯೂರಿಚ್: ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ 2016ನೇ ಸಾಲಿನ ಫಿಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಜ್ಯೂರಿಚ್ ನಲ್ಲಿ ನಡೆದ ಫಿಫಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರೊನಾಲ್ಡೊ ಅವರಿಗೆ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕಾರದ ಬಳಿಕ ಮಾತನಾಡಿದ ರೊನಾಲ್ಡೊ 2016ನೇ ವರ್ಷವನ್ನು ತಾನೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು. ಇತ್ತೀಚೆಗಷ್ಟೇ ಮುಕ್ತಾಯವಾದ ಬ್ಯಾಲನ್ ಡಿಒರ್ ಫುಟ್ ಬಾಲ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದ ಪೋರ್ಚುಗಲ್ ಫುಟ್ ಬಾಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ದೊ ವರ್ಷದ ತಮ್ಮ ಅತ್ಯುತ್ತಮ ಪ್ರದರ್ಶನದಿಂದಾಗಿ ಅತ್ಯುತ್ತಮ ಶ್ರೇಷ್ಠ ಆಟಗಾರ ಎಂಬ ಪ್ರಶಸ್ತಿಗೆ ಭಾಜನರಾಗಿದ್ದರು.
ಇನ್ನು ಅಮೆರಿಕ ಮಹಿಳಾ ಫುಟ್ ಬಾಲ್ ತಂಡ ಆಟಗಾರ್ತಿ ಕಾರ್ಲಿ ಲ್ಲಾಯ್ಡ್ ಅವರು ಮಹಿಳಾ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದಿದ್ದು, ಇಟಲಿ ತಂಡದ ಕೋಚ್ ಕ್ಲಾಡಿಯೋ ರನೈರಿ ಅವರು ಪುರುಷರ ತಂಡದ ಅತ್ಯುತ್ತಮ ಕೋಚ್ ಪ್ರಶಸ್ತಿ ಪಡೆದರು. ಅರ್ಜೆಂಟೈನಾದ ಫುಟ್ ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರು ರಿನೈರಿ ಅವರಿಗೆ ಪ್ರಶಸ್ತಿ ಪ್ರಧಾನಿ ಮಾಡಿದರು. ಅಂತೆಯೇ ಮಹಿಳಾ ತಂಡ ಉತ್ತಮ ಕೋಚ್ ಪ್ರಶಸ್ತಿಗೆ ಜರ್ಮನಿ ತಂಡದ ಸಿಲ್ವಿಯಾನೀಡ್ ಪಡೆದರು.
ಅಂತೆಯೇ ಫೇರ್ ಪ್ಲೇ ಪ್ರಶಸ್ತಿ ಅಟ್ಲಾಂಟಿಕೋ ನ್ಯಾಕನಲ್ ಪಾಲಾಗಿದ್ದು, ಬ್ರಿಜಿಲ್ ತಂಡ ಫಾಲ್ಕೋ ಅವರಿಗೆ ಫಿಫಾ ಔಟ್ ಸ್ಟಾಂಡಿಂಗ್ ಕರಿಯರ್ (ಜೀವಮಾನ ಶ್ರೇಷ್ಟ ಪ್ರಶಸ್ತಿ) ಪ್ರಶಸ್ತಿ ನೀಡಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


