ಕ್ರೀಡೆ

ಸೇವಾ ತೆರಿಗೆ ಪಾವತಿ ವಂಚನೆ: ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ನೊಟೀಸ್

ಸೇವಾ ತೆರಿಗೆ ಪಾವತಿಸದ್ದಕ್ಕಾಗಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಸೇವಾ ತೆರಿಗೆ...

ಸೇವಾ ತೆರಿಗೆ ಪಾವತಿ ವಂಚನೆ: ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ನೊಟೀಸ್
ಸಾನಿಯಾ ಮಿರ್ಜಾ
Published On :
ಹೈದರಾಬಾದ್: ಸೇವಾ ತೆರಿಗೆ ಪಾವತಿಸದ್ದಕ್ಕಾಗಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಸೇವಾ ತೆರಿಗೆ ಇಲಾಖೆ ನೊಟೀಸ್ ಕಳುಹಿಸಿದೆ.
ಸೇವಾ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಸಾನಿಯಾ ಮಿರ್ಜಾ ಅವರಿಗೆ ಮೊನ್ನೆ 6ನೇ ತಾರೀಖಿನಂದು ಸಮನ್ಸ್ ಜಾರಿ ಮಾಡಿದ್ದು ಫೆಬ್ರವರಿ 16ರೊಳಗೆ ಖುದ್ದಾಗಿ ಅಥವಾ ಸಂಬಂಧಪಟ್ಟ ಏಜೆಂಟರ್ ಇಲಾಖೆಯ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.
1994ರ ಹಣಕಾಸು ಕಾಯ್ದೆ ನಿಬಂಧನೆಯನ್ನು ಉಲ್ಲಂಘಿಸಿದವರು,  ಸೇವಾ ತೆರಿಗೆ ಕಟ್ಟದೆ ವಂಚಿಸಿದವರನ್ನು ವಿಚಾರಣೆಗೊಳಪಡಿಸಲಾಗುತ್ತದೆ. ಸೇವಾ ತೆರಿಗೆಗೆ ಅನ್ವಯವಾಗುವ ಹಣಕಾಸು ಕಾಯ್ದೆ 1994ರಡಿ ಮತ್ತು ಕೇಂದ್ರ  ತೆರಿಗೆ ಕಾಯ್ದೆ 1944ರಡಿ ನೀವು ಖುದ್ದಾಗಿ ಇಲ್ಲವೇ ನಿಮ್ಮ ಏಜೆಂಟರ ಮೂಲಕ ಫೆಬ್ರವರಿ 16ರೊಳಗೆ ವಿಚಾರಣೆಗೆ ಕಚೇರಿಗೆ ಹಾಜರಾಗಬೇಕು. ಈ ಸಂದರ್ಭದಲ್ಲಿ ಅಗತ್ಯಪಟ್ಟ ದಾಖಲೆಗಳನ್ನು ಕೂಡ ಸಲ್ಲಿಸಬೇಕು ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಸೂಕ್ತ ಕಾರಣಗಳಿಲ್ಲದೆ ಕಚೇರಿಗೆ ಹಾಜರಾಗಲು ವಿಫಲವಾದಲ್ಲಿ  ಮತ್ತು ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ತೋರಿಸದಿದ್ದಲ್ಲಿ ಐಪಿಸಿ ಸೆಕ್ಷನ್ ಅನ್ವಯ ಶಿಕ್ಷೆಗೊಳಪಡುತ್ತೀರಿ ಎಂದು ಕೂಡ ನೊಟೀಸ್ ನಲ್ಲಿ ವಿವರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.