ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ!
ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಈ ವರೆಗೂ ಭಾರತೀಯ ಕುಸ್ತಿ ಪಟುಗಳು ಒಟ್ಟು 9 ಚಿನ್ನ ಮತ್ತು 7 ಬೆಳ್ಳಿ ಪದಕ ಪಡೆದಿದ್ದಾರೆ.

Published On :
ಜೊಹನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಈ ವರೆಗೂ ಭಾರತೀಯ ಕುಸ್ತಿ ಪಟುಗಳು ಒಟ್ಟು 9 ಚಿನ್ನ ಮತ್ತು 7 ಬೆಳ್ಳಿ ಪದಕ ಪಡೆದಿದ್ದಾರೆ.
ಟೂರ್ನಿ ಎಲ್ಲ 10 ವಿಭಾಗಗಳಲ್ಲಿಯೂ ಭಾರತ ಮಹಿಳಾ ತಂಡ ಪದಕಗಳನ್ನು ಕೊರಳಿಗೆ ಹಾಕಿಸಿಕೊಂಡಿದ್ದು, 65 ಕೆಜಿ ವಿಭಾಗದ ಕುಸ್ತಿ ವಿಭಾಗದಲ್ಲಿ ರಿತು ಮಲ್ಲಿಕ್, 68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಣ್ ಮತ್ತು 72 ಕೆಜಿ ವಿಭಾಗದಲ್ಲಿ ಕಿರಣ್ ಅವರು ಚಿನ್ನದ ಗೆದ್ದಿದ್ದು, 59 ಕೆಜೆ ವಿಭಾಗದಲ್ಲಿ ರವಿತಾ ಮತ್ತು 76 ಕೆಜಿ ವಿಭಾಗದಲ್ಲಿ ಪೂಜಾ ಬೆಳ್ಳಿ ಪದಕ ಪಡೆದಿದ್ದಾರೆ.
ಇನ್ನುಳಿದಂತೆ 76 ಕೆಜಿ ವಿಭಾಗದಲ್ಲಿ ಕವಿತಾ ಮತ್ತು 72 ಕೆಜಿ ವಿಭಾಗದಲ್ಲಿ ತೋಮರ್ ಕಂಚಿನ ಪದಕ ಗೆದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sportsಕ್ರೀಡೆindiaಭಾರತದಕ್ಷಿಣ ಆಫ್ರಿಕಾSouth AfricaJohannesburgCommonwealth Wrestling Championshipಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ಜೋಹನ್ಸ್ ಬರ್ಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


