ದುಬೈ ವಿಶ್ವ ಸೂಪರ್ ಸೀರಿಸ್: ಯಮಗುಚಿಯನ್ನು ಮಣಿಸಿದ ಸಿಂಧು, ಶ್ರೀಕಾಂತ್ ಗೆ ಸೋಲು
ದುಬೈ ವಿಶ್ವ ಸೂಪರ್ ಸೀರಿಸ್ ಫೈನಲ್ ಬ್ಯಾಡ್ಮಿಂಟನ್ ನಲ್ಲಿ ಭಾರತದ ಪಿ.ವಿ.ಸಿಂಧು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

Published On :
ದುಬೈ: ದುಬೈ ವಿಶ್ವ ಸೂಪರ್ ಸೀರಿಸ್ ಫೈನಲ್ ಬ್ಯಾಡ್ಮಿಂಟನ್ ನಲ್ಲಿ ಭಾರತದ ಪಿ.ವಿ.ಸಿಂಧು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 21–9, 21–13 ಸೆಟ್ ಗಳ ಅಂತರದಲ್ಲಿ ಜಯ ದಾಖಲಿಸಿದ್ದಾರೆ.
ಇದಾಗಲೇ ಸೆಮಿ ಫೈನಲ್ಸ್ ಪ್ರವೇಶಿಸಿರುವ ಸಿಂಧು ತಮ್ಮ ‘ಎ’ ಗುಂಪಿನ ಕಡೆಯ ಹೋರಾಟದಲ್ಲಿ ಜಪಾನ್ ನ ಆಟಗಾರ್ತಿಯನ್ನು ಪರಾಭವಗೊಳಿಸಿದ್ದಾರೆ.
ದುಬೈನ ಶೇಖ್ ಹಮ್‌ದಾನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ವರ್ಷ ಎರಡು ಸೂಪರ್ ಸೀರಿಸ್ ಪ್ರಶಸ್ತಿ ಜಯಿಸಿದ್ದ ಸಿಂಧು ಈ ಜಯದೊಡನೆ ಮುಂದಿನ ಸುತ್ತು ಪ್ರವೇಶಿಸಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಸಿಂಧು ಚೀನಾದ ಚೆನ್ ಯುಫಿ ವಿರುದ್ಧ ಸೆಣೆಸಲಿದ್ದಾರೆ.
ನಿನ್ನೆ ನಡೆದ ಇನ್ನೊಂದು ಪಂದ್ಯದಲ್ಲಿ ಯುಫಿ 21–18, 13–21, 21–18 ಸೆಟ್ ಗಳ ಅಂತರದಲ್ಲಿ ಥಾಯ್ಲೆಂಡ್‌ನ ರಚನೊಕ್ ಇಂಟಾನೊನ್ ಅವರನ್ನು ಮಣಿಸಿದ್ದಾರೆ. ಇದೇ ವೇಳೆ ಭಾರತದ ಇನ್ನೋರ್ವ ಭರವಸೆಯ ಆಟಗಾರ ಕಿಡಂಬಿ ಶ್ರೀಕಾಂತ್ ಚೀನಾದ ಶಿ ಯುಕಿ ವಿರುದ್ಧ 17-21, 21-19, 14-21 ಸೆಟ್ ಗಳ ಅಂತರದಲ್ಲಿ ಪರಾಭವವ ಗೊಂಡು ಸರಣಿಯಿಂದ ಹೊರನಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕಿಡಂಬಿ ಶ್ರೀಕಾಂತ್Kidambi SrikanthP.V. Sindhuಪಿ.ವಿ. ಸಿಂಧುAkane YamaguchiDubai World Superseriesದುಬೈ ವಿಶ್ವ ಸೂಪರ್ ಸೀರೀಸ್ಅಕಾನೆ ಯಮಗುಚಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


