ಕ್ರೀಡೆ

ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಮಂಜು ಕುಮಾರಿಗೆ ಕಂಚು

ಫಿನ್ ಲ್ಯಾಂಡ್ ನ ತಂಪೆರೆಯಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ...

ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಮಂಜು ಕುಮಾರಿಗೆ ಕಂಚು
ಮಂಜು ಕುಮಾರಿ
Published On :
ನವದೆಹಲಿ: ಫಿನ್ ಲ್ಯಾಂಡ್ ನ ತಂಪೆರೆಯಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಂಜು ಕುಮಾರಿ ಅವರು ಉಕ್ರೇನ್ ನ ಇಲೋನ ಪ್ರೊಕೊಪೆವಿನಿಕ್ ಅವರನ್ನು 2-0 ಅಂತರದಿಂದ ಮಣಿಸುವ ಮೂಲಕ ಕಂಚು ಖಚಿತಪಡಿಸಿಕೊಂಡಿದ್ದಾರೆ.
ಗುರುವಾರ ನಡೆದ 59 ಕೆಜಿ ವಿಭಾಗದಲ್ಲಿ ಬಲ್ಗೇರಿಯಾದ ಅಲೆಕ್ಸಾಂಡ್ರಿಯನ್ ನಿಕೊಲಾವೀ ಕಾಶಿನೋವಾ ಅವರ 5-1 ಅಂಕಗಳ ಅಂತರದಿಂದ ಗೆಲವು ಸಾಧಿಸುವ ಮೂಲಕ ಕ್ರೀಡಾಕೂಟದ ಪ್ರಮುಖ ಸುತ್ತಿಗೆ ಪದಾರ್ಪಣೆ ಮಾಡಿದ್ದರು.
ಈ ಮಧ್ಯೆ 44 ಕೆಜಿ ವಿಭಾಗದಲ್ಲಿ ದಿವ್ಯಾ ತೋಮರ್, 51 ಕೆಜಿ ವಿಭಾಗದಲ್ಲಿ ನಂದಿನಿ ಸಲೋಖೆ ಹಾಗೂ 67 ಕೆಜಿ ವಿಭಾಗದಲ್ಲಿ ಪೂಜಾ ದೇವಿ ಅವರು ಪದಕ ಸುತ್ತಿಗೆ ಅರ್ಹತೆಯ ಪಡೆಯುವಲ್ಲಿ ವಿಫಲವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.