ಪರಿಹಾರಕ್ಕಾಗಿ ಆಗ್ರಹಿಸಿ ಬಿಸಿಸಿಐ ಗೆ ನೋಟಿಸ್ ಕಳಿಸಲು ಪಿಸಿಬಿ ತೀರ್ಮಾನ
ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡುವುದಕ್ಕೆ ಭಾರತ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿ ಬಿಸಿಸಿಐ ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಾನೂನು ನೋಟಿಸ್ ಕಳಿಸಲು ತೀರ್ಮಾನಿಸಿದೆ.

Published On :
ಇಸ್ಲಾಮಾಬದ್: ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡುವುದಕ್ಕೆ ಭಾರತ ನಿರಾಕರಿಸಿರುವ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿ ಬಿಸಿಸಿಐ ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಾನೂನು ನೋಟಿಸ್ ಕಳಿಸಲು ತೀರ್ಮಾನಿಸಿದೆ.
ಪಿಟಿಐ ಗೆ ಮಾಹಿತಿ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿ, "ಕಾನೂನು ಸಮರಕ್ಕೆ ಸಿದ್ಧಗೊಳ್ಳುವುದಕ್ಕೆ ಸಂಬಂಧಿಸಿದಂತೆ ಪಿಸಿಬಿ ಕಾನೂನು ಸಲಹೆಗಾರ ಸಲ್ಮಾನ್ ನಾಸಿರ್ ಲಂಡನ್ ಗೆ ಭೇಟಿ ನೀಡಿದ್ದು, ಪರಿಹಾರಕ್ಕಾಗಿ ಆಗ್ರಹಿಸಿ ಬಿಸಿಸಿಐ ಗೆ ನೋಟಿಸ್ ಕಳಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ನಡೆದ ಐಸಿಸಿ ಸಭೆಯಲ್ಲೂ ಸಹ ಪರಿಹಾರಕ್ಕಾಗಿ ಆಗ್ರಹಿಸಿ ನೋಟೀಸ್ ಕಳಿಸುತ್ತೇವೆ ಎಂಬ ಅಂಶವನ್ನು ಬಿಸಿಸಿಐಗೆ ಸ್ಪಷ್ಟಪಡಿಸಿರುವುದಾಗಿ ಪಿಸಿಬಿ ಹೇಳಿದೆ. ಪಾಕಿಸ್ತಾನ ಭಾರತ ನಡುವೆ ಎರಡು ಸರಣಿಗಳನ್ನು ಆಯೋಜಿಸುವುದಕ್ಕೆ ಉಭಯ ದೇಶಗಳೂ 2014 ರಲ್ಲಿ ಸಹಿ ಹಾಕಿದ್ದವು. ಆದರೆ ನಂತರದ ದಿನಗಳಲ್ಲಿ ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸಿ, ಭಾರತದ ಒಳಗೆ ಹಾಗೂ ಗಡಿ ಪ್ರದೇಶದಲ್ಲಿ ದಾಳಿ ನಡೆಸಿದ್ದರಿಂದ ಭಾರತ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುವುದಕ್ಕೆ ನಿರಾಕರಿಸಿತ್ತು.
" ಭಾರತ ಸರ್ಕಾರದಿಂದ ಒಪ್ಪಿಗೆ ಪಡೆಯಲು ವಿಫಲವಾದರೆ ಅದು ಬಿಸಿಸಿಐ ನ ಸಮಸ್ಯೆಯೇ ಹೊರತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಮಸ್ಯೆಯಲ್ಲ. ಐಸಿಸಿ ಸ್ವಾಯತ್ತ ಸಂಸ್ಥೆಯಾಗಿದ್ದು, ಅದರ ಸದಸ್ಯರು ಐಸಿಸಿ ನಿಯಮಗಳಿಗೆ ಬದ್ಧವಾಗಿರಬೇಕಾಗುತ್ತದೆ" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. 6 ಕ್ರಿಕೆಟ್ ಸರಣಿ ಆಯೋಜಿಸಿದಿದ್ದರೆ ಪಾಕಿಸ್ತಾನಕ್ಕೆ ಹಣ ಸಿಗುತ್ತಿದ್ದು, ಆದರೆ ಭಾರತ ಕ್ರಿಕೆಟ್ ಸರಣಿಯನ್ನು ನಿರಾಕರಿಸಿರುವುದರಿಂದ ಪಾಕಿಸ್ತಾನಕ್ಕೆ 200 ಮಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


